August 21, 2026
Friday, August 21, 2026
spot_img

SHOCKING | ಗಂಗಾ ನದಿಯಲ್ಲಿ ಭೀಕರ ದೋಣಿ ದುರಂತ: ಇಬ್ಬರು ಜಲಸಮಾಧಿ, 5 ಮಂದಿ ನಾಪತ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಹಾರದ ಪಾಟ್ನಾದ ಉಮಾನಾಥ್ ಗಂಗಾ ಘಾಟ್ ಬಳಿ 14 ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿ ಗಂಗಾ ನದಿಯಲ್ಲಿ ಏಕಾಏಕಿ ಮುಳುಗಿದ ಘಟನೆ ನಡೆದಿದೆ.

ಬಲವಾದ ಗಾಳಿ ಮತ್ತು ನದಿಯ ನೀರಿನ ಮಟ್ಟ ಏರಿಕೆಯಿಂದ ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.

ಹವಾಮಾನ ವೈಪರಿತ್ಯದಿಂದ ದುರಂತ

ಪ್ರವಾಹ ಪರಿಸ್ಥಿತಿಯಲ್ಲಿದ್ದ ಗಂಗಾ ನದಿಯಲ್ಲಿ ತೀವ್ರ ಗಾಳಿ ಬೀಸಿದ ಪರಿಣಾಮ ದೋಣಿ ನಿಯಂತ್ರಣ ತಪ್ಪಿ ಮುಳುಗಿದಿದೆ. ದೋಣಿಯಲ್ಲಿ ರಕ್ಷಣಾ ಉಪಕರಣಗಳಿಲ್ಲದಿರುವುದು ಅಪಘಾತವನ್ನು ಮತ್ತಷ್ಟು ಗಂಭೀರಗೊಳಿಸಿದೆ ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ:

7 ಮಂದಿ ರಕ್ಷಣೆ, ಶೋಧ ಕಾರ್ಯ ಮುಂದುವರಿಕೆ

ಘಟನೆ ಬಳಿಕ ಸ್ಥಳೀಯರು ಹಾಗೂ ಎಸ್‌ಡಿಆರ್‌ಎಫ್ ತಂಡ ತಕ್ಷಣ ಕಾರ್ಯಾಚರಣೆ ನಡೆಸಿ 7 ಜನರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಆದರೆ ದೋಣಿಯಲ್ಲಿದ್ದ ಐದು ಮಂದಿ ಇನ್ನೂ ನಾಪತ್ತೆಯಾಗಿದ್ದು, ಅವರಿಗಾಗಿ ನಿರಂತರ ಶೋಧ ಕಾರ್ಯ ನಡೆಯುತ್ತಿದೆ.

ಇಬ್ಬರ ಮೃತದೇಹ ಪತ್ತೆ

ರಕ್ಷಣಾ ಕಾರ್ಯಾಚರಣೆಯಲ್ಲಿ ನೀಲಂ ಕುಮಾರಿ (30) ಮತ್ತು ಕಾಶಿ ಕುಮಾರ್ (15) ಅವರ ಮೃತದೇಹಗಳನ್ನು ನೀರಿನಿಂದ ಹೊರತೆಗೆದಲಾಗಿದೆ. ಪ್ರತಿಕೂಲ ಹವಾಮಾನ ನಡುವೆಯೂ ಮುಳುಗು ತಜ್ಞರು ಶೋಧ ಕಾರ್ಯ ಮುಂದುವರೆಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !