August 28, 2026
Friday, August 28, 2026
spot_img

ಚುನಾವಣೆಯಲ್ಲಿ ಹೀನಾಯ ಸೋಲು: ಕೊಡಗಿನ ರೆಸಾರ್ಟ್‌ ನಲ್ಲಿ ವಿಶ್ರಾಂತಿಗೆ ಜಾರಿದ ಸ್ಟಾಲಿನ್, ಉದಯನಿಧಿ

ಹೊಸ ದಿಗಂತ ವರದಿ, ಮಡಿಕೇರಿ:

ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಹಾಗೂ ಅವರ ಮಗ ಉದಯನಿಧಿ ಕುಟುಂಬಸ್ಥರು ಕೊಡಗಿಗೆ ಆಗಮಿಸಿದ್ದಾರೆ.

ಎರಡು ದಿನಗಳ ಕಾಲ ವಾಸ್ತವ್ಯ

ಮಡಿಕೇರಿ ಸಮೀಪದ ರೆಸಾರ್ಟ್ ಒಂದರಲ್ಲಿ ಎರಡು ದಿನಗಳ ಕಾಲ ವಾಸ್ತವ್ಯ ಹೂಡಿರುವ ಸ್ಟಾಲಿನ್, ಪತ್ನಿ ದುರ್ಗಾ ಮತ್ತಿತರ ಕುಟುಂಬ ಸದಸ್ಯರೊಂದಿಗೆ ವಿಶ್ರಾಂತಿಗೆ ಜಾರಿದ್ದಾರೆ.

ತಮಿಳುನಾಡು ವಿಧಾನ ಸಭಾ ಚುನಾವಣೆಗಾಗಿ ರಾಜ್ಯದಾದ್ಯಂತ ಡಿಎಂಕೆ ಮತ್ತು ಮೈತ್ರಿಕೂಟದ ಅಭ್ಯರ್ಥಿಗಳ ಪರವಾಗಿ ಬಿರುಸಿನ ಪ್ರಚಾರ ನಡೆಸಿದ್ದ ಸ್ಟಾಲಿನ್ ಅವರು ಇದೀಗ ಅಧಿಕಾರ ಕಳೆದುಕೊಂಡಿದ್ದು, ಈ ಹಿನ್ನೆಲೆ ಕುಟುಂಬದ ಜೊತೆ ಕೊಡಗಿಗೆ ಅಗಮಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !