May 31, 2026
Sunday, May 31, 2026
spot_img

IPL ನೋಡ್ತಿದ್ದೀರಾ? ಸಿಕ್ಸರ್-ಫೋರ್ ಜೊತೆಗೆ ಸ್ನ್ಯಾಕ್ ಸ್ಕೋರ್ ಕೂಡ ಹೈ ಇರ್ಲಿ: 5 ನಿಮಿಷದಲ್ಲಿ ರೆಡಿ ಈ ಸ್ನ್ಯಾಕ್

ಐಪಿಎಲ್ ಪಂದ್ಯ ನೋಡುತ್ತಾ ಹಸಿವು ಕಾಡ್ತಿದೆಯಾ? ಮನೆಯಲ್ಲಿರುವ ಬ್ರೆಡ್‌ನಿಂದಲೇ ಕೆಲವೇ ನಿಮಿಷಗಳಲ್ಲಿ ರುಚಿಕರವಾದ ಮಸಾಲಾ ಬ್ರೆಡ್ ಬೈಟ್ಸ್ ತಯಾರಿಸಬಹುದು.

ಬೇಕಾಗುವ ಸಾಮಗ್ರಿಗಳು

4 ಬ್ರೆಡ್ ಸ್ಲೈಸ್
1 ಸಣ್ಣ ಈರುಳ್ಳಿ (ಸಣ್ಣದಾಗಿ ಕತ್ತರಿಸಿದ್ದು)
1 ಟೊಮೆಟೊ (ಸಣ್ಣದಾಗಿ ಕತ್ತರಿಸಿದ್ದು)
2 ಟೇಬಲ್ ಸ್ಪೂನ್ ಚೀಸ್ (ಐಚ್ಛಿಕ)
1 ಟೀ ಸ್ಪೂನ್ ಚಿಲ್ಲಿ ಫ್ಲೇಕ್ಸ್
1 ಟೀ ಸ್ಪೂನ್ ಚಾಟ್ ಮಸಾಲಾ
1 ಟೇಬಲ್ ಸ್ಪೂನ್ ಬೆಣ್ಣೆ
ಉಪ್ಪು ಸ್ವಲ್ಪ

ಮಾಡುವ ವಿಧಾನ

ಬ್ರೆಡ್ ಸ್ಲೈಸ್‌ಗಳನ್ನು ಚಿಕ್ಕ ಚೌಕಾಕಾರದ ತುಂಡುಗಳಾಗಿ ಕತ್ತರಿಸಿ. ಒಂದು ಬೌಲ್‌ನಲ್ಲಿ ಈರುಳ್ಳಿ, ಟೊಮೆಟೊ, ಚಾಟ್ ಮಸಾಲಾ, ಚಿಲ್ಲಿ ಫ್ಲೇಕ್ಸ್ ಮತ್ತು ಉಪ್ಪು ಸೇರಿಸಿ ಮಿಕ್ಸ್ ಮಾಡಿ. ಬ್ರೆಡ್ ಮೇಲೆ ಈ ಮಿಶ್ರಣವನ್ನು ಹರಡಿ. ಮೇಲೆ ಚೀಸ್ ಉದುರಿಸಿ.

ತವೆಯಲ್ಲಿ ಸ್ವಲ್ಪ ಬೆಣ್ಣೆ ಹಾಕಿ ಬ್ರೆಡ್ ತುಂಡುಗಳನ್ನು 3-4 ನಿಮಿಷ ಕ್ರಿಸ್ಪಿಯಾಗುವವರೆಗೆ ಬೇಯಿಸಿ. ಬಿಸಿ ಬಿಸಿಯಾಗಿ ಟೊಮೆಟೊ ಸಾಸ್ ಜೊತೆಗೆ ಸರ್ವ್ ಮಾಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !