June 3, 2026
Wednesday, June 3, 2026
spot_img

ಅಭಿವೃದ್ಧಿಯತ್ತ ಕರ್ನಾಟಕ ದೊಡ್ಡ ಹೆಜ್ಜೆ ಇಡಲಿದೆ: ಶಿವಕುಮಾರ್‌ ಸಿಎಂ ಆಗಿದ್ದು ಖುಷಿ ಎಂದ ನಟಿ ರಮ್ಯಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕರ್ನಾಟಕ ಅಭಿವೃದ್ಧಿಯತ್ತ ದೊಡ್ಡ ಹೆಜ್ಜೆ ಇಡಲಿದೆ. ಡಿ.ಕೆ ಶಿವಕುಮಾರ್‌ ಅವರು ಸಿಎಂ ಆಗಿದ್ದು ತುಂಬಾ ಖುಷಿ ಆಗಿದೆ ಎಂದು ನಟಿ ರಮ್ಯಾ ಹೇಳಿದ್ದಾರೆ.

ಈಗಷ್ಟೇ ಡಿ.ಕೆ. ಶಿವಕುಮಾರ್‌ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಕುಟುಂಬದವರು, ಆಪ್ತರು ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ನಟಿ ರಮ್ಯಾ ಕೂಡ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಡಿಕೆಶಿ ಅವರು ಸಿಎಂ ಆಗಿರೋದು ತುಂಬಾನೇ ಖುಷಿ ವಿಷಯ. ನಮ್ಮ ರಾಜ್ಯದಲ್ಲಿ ದೊಡ್ಡ ಬದಲಾವಣೆ ಆಗೋದು ಖಂಡಿತ. ರಾಜ್ಯಕ್ಕೆ ಅನುಕೂಲ ಆಗುವ ನಿರ್ಧಾರಗಳನ್ನು ಅವರು ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ.

ನನಗೆ ರಾಜಕೀಯಕ್ಕೆ ಮರಳುವ ಆಲೋಚನೆ ಇಲ್ಲ. ಅವರಿಗೆ ಶುಭ ಹಾರೈಸಿ ಸಂಭ್ರಮಿಸೋದಕ್ಕೆ ಬಂದಿದ್ದೇನೆ ಅಷ್ಟೆ ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !