September 4, 2026
Friday, September 4, 2026
spot_img

ನಟಿ ಶುಭಾ ಪೂಂಜಾ ವೈವಾಹಿಕ ಜೀವನ ಕೋರ್ಟಿಗೆ, ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕನ್ನಡ ಚಿತ್ರರಂಗದ ಖ್ಯಾತ ನಟಿ ಶುಭಾ ಪೂಂಜ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದಿದ್ದು, ದಂಪತಿ ಡಿವೋರ್ಸ್‌ ಮೊರೆ ಹೋಗಿದ್ದಾರೆ.

ಮದುವೆಯಾಗಿ ಕೇಲವ ನಾಲ್ಕು ವರ್ಷಕ್ಕೆ ಶುಭಾ ಹಾಗೂ ಸುಮಂತ್‌ ಬಿಲ್ಲವ ಒಪ್ಪಿಗೆ ಮೇರೆಗೆ ಡಿವೋರ್ಸ್‌ ಕೋರಿ ಫ್ಯಾಮಿಲಿ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಉದ್ಯಮಿ ಸುಮಂತ್‌ ಬಿಲ್ಲವ ಹಾಗೂ ಶುಭಾ ಕೆಲವು ವರ್ಷಗಳಿಂದ ಪ್ರೀತಿಸಿ ಸರಳವಾಗಿ ಮದುವೆಯಾಗಿದ್ದರು.

ಇದೀಗ ಇಬ್ಬರೂ ದೂರಾಗುವ ನಿರ್ಧಾರಕ್ಕೆ ಬಂದಿದ್ದಾರೆ. ಚಂದದ ಜೋಡಿ ಮಧ್ಯೆ ಯಾವ ಸಮಸ್ಯೆ ಬಂತು ಎಂದು ಪ್ರಶ್ನಿಸಿದಾಗ ವೈಯಕ್ತಿಯ ಜೀವನದ ಬಗ್ಗೆ ಮಾಹಿತಿ ಬಿಟ್ಟುಕೊಡಲು ಇಷ್ಟಪಡೋದಿಲ್ಲ ಎಂದು ಸುಮಂತ್‌ ಹೇಳಿಕೊಂಡಿದ್ದಾರೆ.

ಈಗ ಇವರಿಬ್ಬರು ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ಪ್ರಕ್ರಿಯೆಯ ಭಾಗವಾಗಿ ಇಂದು ಅಥವಾ ಮುಂದಿನ ವಿಚಾರಣೆಯ ದಿನದಂದು ಶುಭಾ ಪೂಂಜಾ ಮತ್ತು ಸುಮಂತ್ ಬಿಲ್ಲವ ಫ್ಯಾಮಿಲಿ ಕೋರ್ಟ್‌ನಲ್ಲಿ ವಿಚಾರಣೆಗೆ ಖುದ್ದಾಗಿ ಹಾಜರಾಗುವ ಸಾಧ್ಯತೆಯಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !