August 3, 2026
Monday, August 3, 2026
spot_img

ನೆಲಕ್ಕೆ ಬಿದ್ದಿದ್ದ ವಿದ್ಯುತ್‌ ತಂತಿಯಿಂದ ಶಾಕ್‌ ಹೊಡೆದು 8 ವರ್ಷದ ಬಾಲಕ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:


ಧಾರಾಕಾರ ಮಳೆಗೆ ನೆಲಕ್ಕೆ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ಎಂಟು ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಬೀದರ್‌ನ ಹುಲಸೂರು ಪಟ್ಟಣದಲ್ಲಿ ನಡೆದಿದೆ.

ಎಂಟು ವರ್ಷದ ಅಲಿ ಮೊಮಿನ್‌ ಮೃತರು. ಬೀದರ್‌ನಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಬಿರುಗಾಳಿಯ ರಭಸಕ್ಕೆ ವಿದ್ಯುತ್‌ ತಂತಿ ಕಟ್‌ ಆಗಿ ನೆಲಕ್ಕೆ ಬಿದ್ದಿದೆ. ಮನೆಗೆ ನೀಡಲಾಗಿದ್ದ ಸಂಪರ್ಕ ವೈರ್‌ ಇದಾಗಿದ್ದು, ಬಾಲಕ ಆಟವಾಡಲು ವೈರ್‌ನ್ನು ಮುಟ್ಟಿದ್ದಾನೆ.

ಕೈಯಲ್ಲಿ ವೈರಲ್‌ ಹಿಡಿದುಕೊಂಡ ತಕ್ಷಣ ಆತನಿಗೆ ಶಾಕ್‌ ಹೊಡೆದಿದ್ದು, ಸ್ಥಳದಲ್ಲಿಯೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಕೂಡಲೇ ಬಾಲಕನನ್ನು ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಮೃತಪಟ್ಟಿದ್ದಾರೆ. ಹುಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆಯಾಗಿದ್ದು, ಜೆಸ್ಕಾಂ ಇಲಾಖೆಯ ಅಧಿಕಾರಿಗಳ ವಿರುದ್ಧ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯವೇ ಬಾಲಕನ ಸಾವಿಗೆ ಕಾರಣವಾಗಿದೆ‌‌ ಎಂದು ಕಿಡಿಕಾರಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !