July 17, 2026
Friday, July 17, 2026
spot_img

ಚಾಮರಾಜನಗರದ ಬಳಿ ಕಾರು-ಪಿಕಪ್‌ ವಾಹನ ಡಿಕ್ಕಿ: ಏಳು ತಿಂಗಳ ಮಗು, ವೃದ್ಧ ದುರ್ಮ*ರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಾರು ಹಾಗೂ ಪಿಕಪ್‌ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಮಗು ಹಾಗೂ ವೃದ್ಧರೊಬ್ಬರು ಮೃತಪಟ್ಟಿರುವ ಘಟನೆ ಚಾಮರಾಜನಗರದ ದೊಡ್ಡಮೂಡಹಳ್ಳಿ ಕ್ರಾಸ್‌ ಬಳಿ ತಡರಾತ್ರಿ ಸಂಭವಿಸಿದೆ.

ಬೆಂಗಳೂರು ಮೂಲದ ಮುಬಾರಕ್‌ ಹಾಗೂ ಇನ್ನೂ ಹೆಸರಿಡದ ಏಳು ತಿಂಗಳ ಕಂದಮ್ಮ ಮೃತರು. ತಮಿಳುನಾಡು ಕಡೆಗೆ ತೆರಳುತ್ತಿದ್ದ ಪಿಕಪ್‌ ವಾಹನ ಹಾಗೂ ತಮಿಳುನಾಡಿನಿಂದ ಬರುತ್ತಿದ್ದ ಎರ್ಟಿಗಾ ನಡುವೆ ಅಪಘಾತ ಸಂಭವಿಸಿದೆ.

ಕಾರಿನಲ್ಲಿದ್ದ ಎಲ್ಲರೂ ಗಂಭೀರವಾಗಿ ಗಾಯಗೊಂಡಿದ್ದಾರೆ.ಗಾಯಗೊಂಡವರನ್ನು ಆಂಬ್ಯುಲೆನ್ಸ್ ಮೂಲಕ ಚಾಮರಾಜನಗರ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಚಾಮರಾಜನಗರ ಪೂರ್ವ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ‌. ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !