September 14, 2026
Monday, September 14, 2026
spot_img

FOOD | ಜಪಾನೀಸ್ ಎಗ್ ಸ್ಯಾಂಡ್‌ವಿಚ್ ತಿನ್ನೋಕೆ ಜಪಾನ್ ಗೆ ಹೋಗ್ಬೇಕಾಗಿಲ್ಲ.. ಮನೆಯಲ್ಲೇ ಮಾಡ್ಬಹುದು

ಸಂಜೆ ಚಹಾ ಅಥವಾ ಕಾಫಿಯ ಜೊತೆ ಸವಿಯಲು ಜಪಾನೀಸ್ ಎಗ್ ಸ್ಯಾಂಡ್‌ವಿಚ್ (ಟ್ಯಾಮಗೊ ಸ್ಯಾಂಡೋ) ಅತ್ಯುತ್ತಮ ಆಯ್ಕೆ. ಮೃದುವಾದ ಬ್ರೆಡ್ ಮತ್ತು ಕ್ರೀಮಿ ಮೊಟ್ಟೆಯ ಫಿಲ್ಲಿಂಗ್‌ನಿಂದ ಈ ಸ್ಯಾಂಡ್‌ವಿಚ್ ರುಚಿಯಲ್ಲಿ ವಿಭಿನ್ನವಾಗಿರುತ್ತದೆ.

ಬೇಕಾಗುವ ಪದಾರ್ಥಗಳು

ಮೊಟ್ಟೆ – 4 (ಬೇಯಿಸಿದ)
ಮೇಯನೇಸ್ – 3-4 ಟೇಬಲ್ ಸ್ಪೂನ್
ಬ್ರೆಡ್ ಸ್ಲೈಸ್ – 4
ಸಕ್ಕರೆ – ½ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಕರಿಮೆಣಸಿನ ಪುಡಿ – ಸ್ವಲ್ಪ
ಬೆಣ್ಣೆ – ಸ್ವಲ್ಪ

ಮಾಡುವ ವಿಧಾನ
ಮೊಟ್ಟೆಗಳನ್ನು ಬೇಯಿಸಿ ಸಿಪ್ಪೆ ತೆಗೆದು, ಹಳದಿ ಮತ್ತು ಬಿಳಿ ಭಾಗವನ್ನು ಪ್ರತ್ಯೇಕಿಸಿ.
ಹಳದಿ ಭಾಗಕ್ಕೆ ಮೇಯನೇಸ್, ಸಕ್ಕರೆ, ಉಪ್ಪು ಮತ್ತು ಕರಿಮೆಣಸಿನ ಪುಡಿ ಸೇರಿಸಿ ಮ್ಯಾಶ್ ಮಾಡಿ.
ಬಿಳಿ ಭಾಗವನ್ನು ಸಣ್ಣದಾಗಿ ಕತ್ತರಿಸಿ ಅದಕ್ಕೆ ಸೇರಿಸಿ ಮಿಕ್ಸ್ ಮಾಡಿ.
ಬ್ರೆಡ್‌ಗೆ ಬೆಣ್ಣೆ ಸವರಿ, ಮೊಟ್ಟೆಯ ಮಿಶ್ರಣವನ್ನು ಹರಡಿ.
ಮತ್ತೊಂದು ಬ್ರೆಡ್‌ನಿಂದ ಮುಚ್ಚಿ ತ್ರಿಕೋನಾಕಾರದಲ್ಲಿ ಕತ್ತರಿಸಿ.
ರುಚಿಕರವಾದ ಜಪಾನೀಸ್ ಎಗ್ ಸ್ಯಾಂಡ್‌ವಿಚ್ ಸವಿಯಲು ಸಿದ್ಧ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !