July 23, 2026
Thursday, July 23, 2026
spot_img

ಅಮೆರಿಕನ್ ಐಸ್ ಹಾಕಿಯಲ್ಲಿ ಮೈಸೂರು ಮೂಲದ ಸಹೋದರರ ಕಮಾಲ್: ಟೆಕ್ಸಾಸ್ ತಂಡಕ್ಕೆ ಮಾಯೋನ್ – ಕ್ರಿಶ್ ಆಯ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮೈಸೂರು ಮೂಲದ ಇಬ್ಬರು ಸಹೋದರರು ಟೆಕ್ಸಾಸ್‌ನ ಫ್ರಿಸ್ಕೋ ಹಾಕಿ ಅಸೋಸಿಯೇಷನ್‌ನ ಸ್ಪರ್ಧಾತ್ಮಕ ತಂಡಗಳಿಗೆ ಆಯ್ಕೆಯಾಗುವ ಮೂಲಕ ಅಮೆರಿಕನ್ ಐಸ್ ಹಾಕಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಮಾಯೋನ್ ಮಾಚಯ್ಯ ಮೇರಿಯಂಡ (15) ಮತ್ತು ಅವರ ಕಿರಿಯ ಸಹೋದರ ಕ್ರಿಶ್ ಮಾಚಯ್ಯ ಮೇರಿಯಂಡ 2026ರ ಬೇಸಿಗೆ ಸೀಸನ್‌ನ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಕರ್ನಾಟಕಕ್ಕೆ ಹೆಮ್ಮೆಯ ಕ್ಷಣ
ಐಸ್ ಹಾಕಿ ಕ್ರೀಡೆಯು ಇನ್ನು ಅಷ್ಟಾಗಿ ಪರಿಚಿತವಿಲ್ಲದಿದ್ದರು, ಕರ್ನಾಟಕದಲ್ಲಿರುವ ಇವರ ಸಂಬಂಧಿಕರು, ಸ್ನೇಹಿತರು ಮತ್ತು ಹಿತೈಷಿಗಳಿಗೆ ಈ ಸಾಧನೆಯು ಅಪಾರ ಹೆಮ್ಮೆ ತಂದಿದೆ. ವರ್ಷಗಳ ನಿರಂತರ ಪರಿಶ್ರಮ, ಕಠಿಣ ತರಬೇತಿ ಮತ್ತು ಸ್ಪರ್ಧಾತ್ಮಕ ಪಂದ್ಯಗಳಲ್ಲಿ ಪಾಲ್ಗೊಳ್ಳುವಿಕೆಯ ಮೂಲಕ, ಇಬ್ಬರು ಸಹೋದರರು ಉತ್ತರ ಅಮೆರಿಕಾದ ಅತ್ಯಂತ ಕಠಿಣ ತಂಡದ ಕ್ರೀಡೆಗಳಲ್ಲಿ ಒಂದಾದ ಐಸ್ ಹಾಕಿಯಲ್ಲಿ ಸ್ಥಿರವಾಗಿ ಪ್ರಗತಿ ಸಾಧಿಸುತ್ತಿದ್ದಾರೆ.

ಶಾಲಾ ಮಟ್ಟದಲ್ಲಿ ಅದ್ಭುತ ಪ್ರದರ್ಶನ
ಫ್ರಿಸ್ಕೋದ ಇಂಡಿಪೆಂಡೆನ್ಸ್ ಹೈಸ್ಕೂಲ್‌ನಲ್ಲಿ 10 ನೇ ತರಗತಿ ವಿದ್ಯಾರ್ಥಿಯಾಗಿರುವ ಮಾಯೋನ್, ಹಿಂದಿನ ಸೀಸನ್‌ಗಳಲ್ಲಿ ನೀಡಿದ ಅತ್ಯುತ್ತಮ ಪ್ರದರ್ಶನಗಳ ಆಧಾರದ ಮೇಲೆ ‘ವಾರ್ಸಿಟಿ’ ತಂಡಕ್ಕೆ ಬಡ್ತಿ ಪಡೆದಿದ್ದಾರೆ. ಇತ್ತೀಚೆಗಷ್ಟೇ ನೆಲ್ಸನ್ ಮಿಡಲ್ ಸ್ಕೂಲ್‌ನಲ್ಲಿ 8 ನೇ ತರಗತಿ ಪೂರ್ಣಗೊಳಿಸಿರುವ ಕ್ರಿಶ್, ತಳಮಟ್ಟದ ಅಭಿವೃದ್ಧಿ ಹಂತದ ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡುವ ಮೂಲಕ ‘ಜೂನಿಯರ್ ವಾರ್ಸಿಟಿ’ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಕೊಡಗಿನ ಮೇರಿಯಂಡ ಕುಟುಂಬದ ಒಡನಾಟ
ಈ ಜೋಡಿಯು ಕೊಡಗಿನ ಮೇರಿಯಂಡ ಕುಟುಂಬಕ್ಕೆ ಸೇರಿದ್ದು, ಇವರ ಪೂರ್ವಜರ ಬೇರುಗಳು ಐತಿಹಾಸಿಕ ‘ಮೇರಿಯಂಡ ಐನ್ ಮನೆ’ಗೆ ಸೇರಿವೆ. ಇವರ ಕುಟುಂಬವು ಮೈಸೂರಿನೊಂದಿಗೂ ಸುದೀರ್ಘ ಒಡನಾಟವನ್ನು ಹೊಂದಿದ್ದು, ಇವರ ಅಜ್ಜಿ ಶಾರದಾ ತಿಮ್ಮಯ್ಯ ಮೈಸೂರಿನಲ್ಲಿ ವಾಸಿಸುತ್ತಿದ್ದಾರೆ. ಅಮೆರಿಕಾದಲ್ಲಿಯೇ ಬೆಳೆದಿದ್ದರೂ, ಮಾಯೋನ್ ಮತ್ತು ಕ್ರಿಶ್ ಮೈಸೂರು ಹಾಗೂ ಕೊಡಗಿಗೆ ನಿಯಮಿತವಾಗಿ ಭೇಟಿ ನೀಡುವ ಮೂಲಕ ಕರ್ನಾಟಕದೊಂದಿಗೆ ನಿಕಟ ಸಂಪರ್ಕವನ್ನು ಉಳಿಸಿಕೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !