September 29, 2026
Tuesday, September 29, 2026
spot_img

‘ದಿ ಹಂಡ್ರೆಡ್‌’ನಲ್ಲಿ ಹೊಸ ಅಧ್ಯಾಯ: ‘RCB ಫಾರ್ಮುಲಾ’ ಮೇಲೆ ಲಂಡನ್ ಸ್ಪಿರಿಟ್ ನಂಬಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಆಯೋಜಿಸುವ ದಿ ಹಂಡ್ರೆಡ್ ಟೂರ್ನಿಗೆ ಸಿದ್ಧತೆಗಳು ವೇಗ ಪಡೆದಿದ್ದು, ಲಂಡನ್ ಸ್ಪಿರಿಟ್ ಫ್ರಾಂಚೈಸಿ ಮಹತ್ವದ ನಿರ್ಧಾರ ಕೈಗೊಂಡಿದೆ. ಕಳೆದ ಆವೃತ್ತಿಯಲ್ಲಿ ಕೇನ್ ವಿಲಿಯಮ್ಸನ್ ತಂಡವನ್ನು ಮುನ್ನಡೆಸಿದ್ದರೆ, ಈ ಬಾರಿ ಇಂಗ್ಲೆಂಡ್ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್‌ಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ.

ಹೊಸ ನಾಯಕನ ಮೇಲೆ ಭರವಸೆ

ತಂಡದಲ್ಲಿ ಹೊಸ ಚೈತನ್ಯ ತುಂಬುವ ಉದ್ದೇಶದಿಂದ ಲಂಡನ್ ಸ್ಪಿರಿಟ್ ಆಡಳಿತ ಮಂಡಳಿ ಲಿವಿಂಗ್‌ಸ್ಟೋನ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿದೆ. ಆಕ್ರಮಣಕಾರಿ ಆಟದ ಮೂಲಕ ಗುರುತಿಸಿಕೊಂಡಿರುವ ಅವರು ಇದೀಗ ನಾಯಕನಾಗಿ ಹೊಸ ಸವಾಲಿಗೆ ಸಜ್ಜಾಗಿದ್ದಾರೆ.

ಆರ್‌ಸಿಬಿ ಜೋಡಿಯ ಎಂಟ್ರಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಯಶಸ್ವಿ ಕೋಚಿಂಗ್ ಜೋಡಿ ಇದೀಗ ಲಂಡನ್ ಸ್ಪಿರಿಟ್ ಶಿಬಿರಕ್ಕೂ ಕಾಲಿಟ್ಟಿದೆ. ಆ್ಯಂಡಿ ಫ್ಲವರ್ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದರೆ, ದಿನೇಶ್ ಕಾರ್ತಿಕ್ ಮೆಂಟರ್ ಹಾಗೂ ಬ್ಯಾಟಿಂಗ್ ಕೋಚ್ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ:

ಲಿವಿಂಗ್‌ಸ್ಟೋನ್‌ಗೆ ಆರ್‌ಸಿಬಿ ನಂಟು

ಲಿವಿಂಗ್‌ಸ್ಟೋನ್ ಈ ಹಿಂದೆ ಆರ್‌ಸಿಬಿ ತಂಡದ ಭಾಗವಾಗಿದ್ದರು. ತಂಡದೊಂದಿಗೆ ಪ್ರಶಸ್ತಿ ಗೆದ್ದ ಅನುಭವ ಹೊಂದಿರುವ ಅವರು ಇದೀಗ ನಾಯಕತ್ವದ ಮೂಲಕ ಮತ್ತೊಂದು ಟ್ರೋಫಿ ಮೇಲೆ ಕಣ್ಣಿಟ್ಟಿದ್ದಾರೆ.

ಬಲಿಷ್ಠ ಕೋಚಿಂಗ್ ಬಳಗ

ಇಂಗ್ಲೆಂಡ್‌ನ ಮಾಜಿ ಸ್ಪಿನ್ನರ್ ಗ್ರೇಮ್ ಸ್ವಾನ್ ಬೌಲಿಂಗ್ ಕೋಚ್ ಆಗಿ ನೇಮಕವಾಗಿದ್ದು, ಅನುಭವಿ ಕೋಚಿಂಗ್ ತಂಡದೊಂದಿಗೆ ಲಂಡನ್ ಸ್ಪಿರಿಟ್ ಈ ಬಾರಿ ಪ್ರಶಸ್ತಿ ಗೆಲುವಿನ ಗುರಿ ಹೊಂದಿದೆ.

Must Read