ಮಳೆಗಾಲ ಆರಂಭವಾದ ಕೂಡಲೇ ಮನೆಯ ಕೆಲಸಗಳಲ್ಲಿ ದೊಡ್ಡ ಸವಾಲಾಗಿ ಪರಿಣಮಿಸುವುದು ಬಟ್ಟೆ ಒಣಗಿಸುವ ಸಮಸ್ಯೆ. ಬೆಳಿಗ್ಗೆ ತೊಳೆದ ಬಟ್ಟೆಗಳು ಸಂಜೆ ಆದರೂ ಒಣಗದೆ ಇರೋದು, ತೇವಾಂಶದಿಂದ ದುರ್ವಾಸನೆ ಬರುವುದು, ಮತ್ತೆ ಮತ್ತೆ ತೊಳೆಯಬೇಕಾಗುವುದು ಬಹುತೇಕ ಎಲ್ಲರ ಮನೆಯ ಕಥೆಯೇ ಆಗಿದೆ. ಆದರೆ ಕೆಲವು ಸರಳ ವಿಧಾನಗಳನ್ನು ಅನುಸರಿಸಿದರೆ ಈ ಸಮಸ್ಯೆಗೆ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು.
ಗಾಳಿ ಚೆನ್ನಾಗಿ ಬೀಸುವ ಜಾಗದಲ್ಲಿ ಬಟ್ಟೆ ಹಾಕಿ
ಬಿಸಿಲು ಇಲ್ಲದಿದ್ದರೂ ಗಾಳಿ ಚೆನ್ನಾಗಿ ಓಡಾಡುವ ಸ್ಥಳದಲ್ಲಿ ಬಟ್ಟೆ ಒಣಗಲು ಹಾಕಿದರೆ ಅವು ಬೇಗ ಒಣಗುತ್ತವೆ. ಕಿಟಕಿ ಅಥವಾ ಬಾಲ್ಕನಿ ಹತ್ತಿರದ ಜಾಗ ಉತ್ತಮ ಆಯ್ಕೆ.
ಬಟ್ಟೆಗಳ ನಡುವೆ ಅಂತರ ಇರಲಿ
ಒಂದರ ಮೇಲೊಂದು ಬಟ್ಟೆ ಹಾಕುವುದರಿಂದ ತೇವಾಂಶ ಹೆಚ್ಚು ಕಾಲ ಉಳಿಯುತ್ತದೆ. ಪ್ರತಿಯೊಂದು ಬಟ್ಟೆಯ ನಡುವೆ ಸ್ವಲ್ಪ ಅಂತರ ಬಿಟ್ಟರೆ ಗಾಳಿ ಸರಿಯಾಗಿ ತಗುಲಿ ಬೇಗ ಒಣಗುತ್ತದೆ.
ಫ್ಯಾನ್ ಅಥವಾ ಎಕ್ಸಾಸ್ಟ್ ಫ್ಯಾನ್ ಸಹಾಯ ಪಡೆಯಿರಿ
ಮನೆಯೊಳಗೆ ಬಟ್ಟೆ ಒಣಗಿಸುತ್ತಿದ್ದರೆ ಸೀಲಿಂಗ್ ಫ್ಯಾನ್ ಅಥವಾ ಎಕ್ಸಾಸ್ಟ್ ಫ್ಯಾನ್ ಬಳಸುವುದರಿಂದ ಒಣಗುವ ವೇಗ ಹೆಚ್ಚುತ್ತದೆ.
ಇದನ್ನೂ ಓದಿ:
ದುರ್ವಾಸನೆ ತಪ್ಪಿಸಲು ತಕ್ಷಣ ಒಣಗಲು ಹಾಕಿ
ವಾಷಿಂಗ್ ಮಷಿನ್ನಲ್ಲಿ ಅಥವಾ ಬಕೆಟ್ನಲ್ಲಿ ತೊಳೆದ ಬಟ್ಟೆಗಳನ್ನು ಹೆಚ್ಚು ಸಮಯ ಹಾಗೆಯೇ ಬಿಡಬೇಡಿ. ಇದರಿಂದ ತೇವದ ವಾಸನೆ ಬರುವ ಸಾಧ್ಯತೆ ಹೆಚ್ಚಿರುತ್ತದೆ.
ಟವೆಲ್ ಟ್ರಿಕ್ ಪ್ರಯತ್ನಿಸಿ
ಹೆಚ್ಚು ನೀರು ಇರುವ ಬಟ್ಟೆಗಳನ್ನು ಒಣ ಟವೆಲ್ನಲ್ಲಿ ಸುತ್ತಿ ಒತ್ತಿದರೆ ಹೆಚ್ಚುವರಿ ನೀರು ಹೀರಿಕೊಳ್ಳುತ್ತದೆ. ಇದರಿಂದ ಬಟ್ಟೆಗಳು ಬೇಗ ಒಣಗುತ್ತವೆ.



