June 13, 2026
Saturday, June 13, 2026
spot_img

ಸಮುದ್ರದ ಮಧ್ಯೆ ಸಾವಿನ ಸದ್ದು: ಭಾರತೀಯ ನಾವಿಕರ ಬ*ಲಿಗೆ ಅಮೆರಿಕ ವಿರುದ್ಧ ಇರಾನ್ ಆಕ್ರೋಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಒಮಾನ್ ಕರಾವಳಿ ಸಮೀಪ ಭಾರತೀಯ ಸಿಬ್ಬಂದಿ ಇದ್ದ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಮೃತಪಟ್ಟ ಘಟನೆಗೆ ಸಂಬಂಧಿಸಿ ಅಮೆರಿಕ ವಿರುದ್ಧ ಇರಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಬೆಳವಣಿಗೆ ಜಾಗತಿಕ ನೌಕಾಯಾನ ಭದ್ರತೆ ಮತ್ತು ಪ್ರಾದೇಶಿಕ ಶಾಂತಿ ಕುರಿತು ಹೊಸ ಚರ್ಚೆಗೆ ಕಾರಣವಾಗಿದೆ.

ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಕೈ, ಮೃತ ನಾವಿಕರ ಕುಟುಂಬಗಳು ಹಾಗೂ ಭಾರತ ಸರ್ಕಾರಕ್ಕೆ ಸಂತಾಪ ಸೂಚಿಸಿದ್ದು, ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಸುವುದು ಜಾಗತಿಕ ಭದ್ರತೆಗೆ ಅಪಾಯಕಾರಿಯಾಗಿದೆ ಎಂದು ಹೇಳಿದ್ದಾರೆ.

ಸಮುದ್ರ ಮಾರ್ಗಗಳ ಭದ್ರತೆ ಬಗ್ಗೆ ಕಳವಳ

ಇತ್ತೀಚಿನ ದಿನಗಳಲ್ಲಿ ಒಮಾನ್ ಸಮೀಪ ಭಾರತೀಯ ಸಿಬ್ಬಂದಿ ಇದ್ದ ಹಲವು ಹಡಗುಗಳು ದಾಳಿಗೆ ಒಳಗಾಗಿದ್ದು, ಈ ಬೆಳವಣಿಗೆ ಅಂತಾರಾಷ್ಟ್ರೀಯ ಸಮುದಾಯದ ಆತಂಕ ಹೆಚ್ಚಿಸಿದೆ. ಭಾರತ ಕೂಡ ವಾಣಿಜ್ಯ ಹಡಗುಗಳ ಮೇಲಿನ ದಾಳಿಗಳನ್ನು ಖಂಡಿಸಿ, ಸಮುದ್ರ ಮಾರ್ಗಗಳ ಸುರಕ್ಷತೆಯನ್ನು ಕಾಪಾಡುವಂತೆ ಒತ್ತಾಯಿಸಿದೆ.

ಇದನ್ನೂ ಓದಿ:

ತನಿಖೆ ಮತ್ತು ರಾಜತಾಂತ್ರಿಕ ಚಟುವಟಿಕೆಗಳು ಚುರುಕು

ಘಟನೆ ಕುರಿತು ವಿವಿಧ ರಾಷ್ಟ್ರಗಳು ಕಳವಳ ವ್ಯಕ್ತಪಡಿಸಿದ್ದು, ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸದಂತೆ ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆಗಳು ಮುಂದುವರಿದಿವೆ. ಮೃತ ಭಾರತೀಯ ನಾವಿಕರಿಗೆ ದೇಶಾದ್ಯಂತ ಸಂತಾಪ ವ್ಯಕ್ತವಾಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !