August 20, 2026
Thursday, August 20, 2026
spot_img

ರಿಲಯನ್ಸ್ ಎಜಿಎಂ ಡಿಜಿಟಲ್ ಅಸಿಸ್ಟೆಂಟ್ ಗೆ ಚಾಲನೆ: ಷೇರುದಾರರಿಗೆ ಇ-ವೋಟಿಂಗ್, ಡಿವಿಡೆಂಡ್ ಮಾಹಿತಿ ಲಭ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ತನ್ನ 49ನೇ ವಾರ್ಷಿಕ ಸಾಮಾನ್ಯ ಸಭೆಗೆ (ಎಜಿಎಂ)ಮುನ್ನ ತನ್ನ ಷೇರುದಾರರ ಅನುಕೂಲಕ್ಕಾಗಿ ವಾಟ್ಸ್‌ಆಪ್ ಆಧಾರಿತ ‘ಎಜಿಎಂ ಡಿಜಿಟಲ್ ಅಸಿಸ್ಟೆಂಟ್’ ಸೇವೆಯನ್ನು ಸಕ್ರಿಯಗೊಳಿಸಿದೆ.

44 ಲಕ್ಷಕ್ಕೂ ಹೆಚ್ಚು ಷೇರುದಾರರು ಎಜಿಎಮ್‌ಗೆ ಸಂಬಂಧಿಸಿದ ಮಾಹಿತಿ, ದಾಖಲೆಗಳು, ಮತದಾನದ ಪ್ರಕ್ರಿಯೆ ಮತ್ತು ಸಹಾಯ ಸೇವೆಗಳನ್ನು ನೇರವಾಗಿ ತಮ್ಮ ಮೊಬೈಲ್ ಫೋನ್‌ಗಳ ಮೂಲಕವೇ ಪಡೆದುಕೊಳ್ಳಬಹುದು. ರಿಲಯನ್ಸ್ ಇಂಡಸ್ಟ್ರೀಸ್‌ನ 49ನೇ ವಾರ್ಷಿಕ ಸಾಮಾನ್ಯ ಸಭೆಯು 2026ರ ಜೂನ್ 19, ಶುಕ್ರವಾರದಂದು ಮಧ್ಯಾಹ್ನ 2 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಜಿಯೋ ಇವೆಂಟ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ನಡೆಯಲಿದೆ.

ವಾಟ್ಸ್‌ ಆಫ್ ಆಧಾರಿತ ಈ ಡಿಜಿಟಲ್ ಅಸಿಸ್ಟೆಂಟ್‌, ಷೇರುದಾರರಿಗೆ ಎಜಿಎಮ್‌ಗೆ ಸಂಬಂಧಿಸಿದ ಬಹುತೇಕ ಎಲ್ಲಾ ಪ್ರಮುಖ ಮಾಹಿತಿಯನ್ನೂ ಒಂದೇ ಕಡೆ ಒದಗಿಸುತ್ತದೆ. ಇದರ ಮೂಲಕ ಎಜಿಎಂ ದಿನಾಂಕ ಮತ್ತು ಸಮಯ, ಸಭೆಯಲ್ಲಿ ಭಾಗವಹಿಸುವ ಪ್ರಕ್ರಿಯೆ, ರಿಮೋಟ್ ಇ-ವೋಟಿಂಗ್, ಇನ್‌ಸ್ಟಾ ಪೋಲ್, ಲಾಭಾಂಶ, ತೆರಿಗೆ, ಪ್ರಮುಖ ದಾಖಲೆಗಳು, ಉಪಯುಕ್ತ ಲಿಂಕ್‌ಗಳು ಹಾಗೂ ಇತರ ವಿವರಗಳನ್ನು ಪಡೆಯಬಹುದು.

ಎಜಿಎಂ ಡಿಜಿಟಲ್ ಅಸಿಸ್ಟೆಂಟ್ ಬಳಸುವುದು ಹೇಗೆ?

ಷೇರುದಾರರು ತಮ್ಮ ಮೊಬೈಲ್‌ನಲ್ಲಿ +91 79771 11111 ಸಂಖ್ಯೆಯನ್ನು ಸೇವ್ ಮಾಡಿ. ವಾಟ್ಸ್‌ ಆಫ್ ತೆರೆದು ಈ ಸಂಖ್ಯೆಯ ಚಾಟ್ ವಿಂಡೋಗೆ ಹೋಗಿ. “Hi” ಎಂದು ಬರೆದು ಸಂದೇಶ ಕಳುಹಿಸಿ. ಪರದೆಯ ಮೇಲೆ ಲಭ್ಯವಿರುವ ಮೆನು ಆಯ್ಕೆಗಳಿಂದ ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಆಯ್ಕೆಯನ್ನು ಆರಿಸಿ. ಎಜಿಎಂ, ಇ-ವೋಟಿಂಗ್, ಇನ್‌ಸ್ಟಾ ಪೋಲ್, ಡಿವಿಡೆಂಡ್, ಟ್ಯಾಕ್ಸೇಷನ್, ದಾಖಲೆಗಳು ಮತ್ತು ಸಹಾಯ ಸೇವೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಿರಿ.

ಇದನ್ನೂ ಓದಿ:

ರಿಲಯನ್ಸ್ ಇಂಡಸ್ಟ್ರೀಸ್‌ನ ವಾರ್ಷಿಕ ವರದಿ 2025-26 ರ ಪ್ರಕಾರ, ಕಂಪನಿಯು ಒಟ್ಟು 44,21,289 ಷೇರುದಾರರನ್ನು ಹೊಂದಿದೆ. ಇಂತಹ ಪರಿಸ್ಥಿತಿಯಲ್ಲಿ, ಈ ಡಿಜಿಟಲ್ ವೇದಿಕೆಯು ಹೆಚ್ಚಿನ ಸಂಖ್ಯೆಯ ಹೂಡಿಕೆದಾರರು ಮತ್ತು ಷೇರುದಾರರಿಗೆ ಎಜಿಎಂ ಪ್ರಕ್ರಿಯೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಮತ್ತು ಅಗತ್ಯ ಮಾಹಿತಿಯನ್ನು ಪಡೆಯಲು ಸಹಾಯ ಮಾಡುತ್ತದೆ.

ಎಜಿಎಂ ಡಿಜಿಟಲ್ ಅಸಿಸ್ಟೆಂಟ್ ಅನ್ನು ರಿಲಯನ್ಸ್ ಗ್ರೂಪ್‌ನ ಅಂಗಸಂಸ್ಥೆಯಾದ ಮತ್ತು ಇಂಟೆಲಿಜೆಂಟ್ ವರ್ಚುವಲ್ ಅಸಿಸ್ಟೆಂಟ್ಸ್ ಕ್ಷೇತ್ರದಲ್ಲಿ ಪ್ರಮುಖ ಕಂಪನಿಯಾಗಿರುವ ಜಿಯೋ ಹ್ಯಾಪ್ಟಿಕ್ ಅಭಿವೃದ್ಧಿಪಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !