ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಬೃಹತ್ ಯಾರ್ಡ್ ನವೀಕರಣ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜೂನ್ 16 ರಿಂದ ಸುಮಾರು 50 ದಿನಗಳ ಕಾಲ ನೂರಾರು ರೈಲುಗಳ ಸಂಚಾರದಲ್ಲಿ ಭಾರಿ ವ್ಯತ್ಯಯ ಉಂಟಾಗಲಿದೆ. ನೈಋತ್ಯ ರೈಲ್ವೆಯು ಕೈಗೆತ್ತಿಕೊಂಡಿರುವ ಈ ತಾಂತ್ರಿಕ ನವೀಕರಣದಿಂದಾಗಿ ಹಲವು ಪ್ರಮುಖ ಎಕ್ಸ್‌ಪ್ರೆಸ್ ಹಾಗೂ ಪ್ಯಾಸೆಂಜರ್ ರೈಲುಗಳನ್ನು ಸಂಪೂರ್ಣವಾಗಿ ಅಥವಾ ಭಾಗಶಃ ರದ್ದುಗೊಳಿಸಲಾಗಿದೆ, ಇನ್ನು ಕೆಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.
ಯಾರ್ಡ್ ನವೀಕರಣ:
ಸಿಲಿಕಾನ್ ಸಿಟಿಯ ಪ್ರಮುಖ ಕನೆಕ್ಟಿವಿಟಿ ಹಬ್ ಆಗಿರುವ ಕೆಎಸ್‌ಆರ್ ಬೆಂಗಳೂರು ಸ್ಟೇಷನ್‌ನಲ್ಲಿ ರೈಲ್ವೆ ಮೂಲಸೌಕರ್ಯ ಹಾಗೂ ಸುರಕ್ಷತೆಯನ್ನು ಹೆಚ್ಚಿಸಲು ಈ ಬೃಹತ್ ಆಪರೇಷನ್ ನಡೆಸಲಾಗುತ್ತಿದೆ.
ಸಂಪೂರ್ಣ ರದ್ದಾದ ರೈಲುಗಳು:
ಜೂನ್ 16 ರಿಂದ ಆಗಸ್ಟ್ 6ರ ವರೆಗಿನ ಅವಧಿಯಲ್ಲಿ ಮೈಸೂರು – ಎಸ್‌ಎಂವಿಟಿ ಬೆಂಗಳೂರು ಪ್ಯಾಸೆಂಜರ್ ಸೇರಿದಂತೆ ಹಲವು ಪ್ರಮುಖ ರೈಲುಗಳು ಸಂಪೂರ್ಣ ರದ್ದಾಗಲಿದೆ.
ಇದನ್ನೂ ಓದಿ:
ಬೇರೆ ನಿಲ್ದಾಣಗಳಿಗೆ ಶಿಫ್ಟ್:
ಇನ್ನು ಬೆಂಗಳೂರಿಗೆ ಬರುವ ಮತ್ತು ಇಲ್ಲಿಂದ ಹೊರಡುವ ಹಲವು ಎಕ್ಸ್‌ಪ್ರೆಸ್ ರೈಲುಗಳನ್ನು ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ಯಶವಂತಪುರ, ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (SMVT) ಬೈಯಪ್ಪನಹಳ್ಳಿ ಅಥವಾ ಕಂಟೋನ್ಮೆಂಟ್ ನಿಲ್ದಾಣಗಳಿಗೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗುತ್ತಿದೆ. ಇನ್ನು ಕೆಲವು ದೀರ್ಘಾವಧಿ ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದ್ದು, ಇಂಟರ್ಸಿಟಿ ರೈಲುಗಳ ಆಗಮನ ಮತ್ತು ನಿರ್ಗಮನದ ಸಮಯದಲ್ಲಿ ವ್ಯತ್ಯಾಸವಿರಲಿದೆ.
ಪ್ರಯಾಣಿಕರಿಗೆ ಸೂಚನೆ:
ಮುಂದಿನ 50 ದಿನಗಳ ಕಾಲ ಲಕ್ಷಾಂತರ ಪ್ರಯಾಣಿಕರಿಗೆ ತಾತ್ಕಾಲಿಕ ತೊಂದರೆಯಾಗಲಿದ್ದು, ನೀವು ಪ್ರಯಾಣ ಬೆಳೆಸುವ ಮುನ್ನ ನಿಮ್ಮ ರೈಲಿನ ನಿಖರವಾದ ಸ್ಟೇಟಸ್ ತಿಳಿಯಲು ಭಾರತೀಯ ರೈಲ್ವೆಯ ಅಧಿಕೃತ ವೆಬ್‌ಸೈಟ್ ಅಥವಾ NTES (National Train Enquiry System) ಆಪ್ ಮೂಲಕ ಪರಿಶೀಲಿಸಿಕೊಳ್ಳಲು ಸೂಚಿಸಲಾಗಿದೆ.



