August 20, 2026
Thursday, August 20, 2026
spot_img

ಭಾರತ-ಫ್ರಾನ್ಸ್ ಸಂಬಂಧ ರಾಜತಾಂತ್ರಿಕತೆಗಿಂತ ಮಿಗಿಲಾದ ಅಪರೂಪದ ಸ್ನೇಹ: ಪ್ರಧಾನಿ ಮೋದಿ ಬಣ್ಣನೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಐರೋಪ್ಯ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಇಂದು ಫ್ರಾನ್ಸ್‌ನ ಸುಂದರ ನೀಸ್ ನಗರದಲ್ಲಿ ಜಂಟಿಯಾಗಿ ಹಮ್ಮಿಕೊಳ್ಳಲಾದ ಭಾರತ್ ಇನ್ನೋವೇಟ್ಸ್ ಉದ್ಯಮಶೀಲತಾ ಸಮಾವೇಶವನ್ನು ಉದ್ಘಾಟಿಸಿದರು.

ಕೇವಲ ವ್ಯಾಪಾರಕ್ಕಷ್ಟೇ ಸೀಮಿತವಾಗಿಲ್ಲ

ಬಳಿಕ ಮಾತನಾಡಿದ ಅವರು, ಇಂದು ಅನೇಕ ದೇಶಗಳು ಕೇವಲ ವ್ಯಾಪಾರ ಮತ್ತು ರಾಜತಾಂತ್ರಿಕ ಸಂಬಂಧಗಳಿಗಾಗಿ ಜೊತೆಯಾಗಿವೆ. ಆದರೆ ಭಾರತ ಮತ್ತು ಫ್ರಾನ್ಸ್ ದೇಶಗಳ ನಡುವಿನ ಬಾಂಧವ್ಯವು ಕೇವಲ ವ್ಯಾಪಾರಕ್ಕಷ್ಟೇ ಸೀಮಿತವಾಗಿಲ್ಲ. ಇಲ್ಲಿ ಪರಸ್ಪರ ನಂಬಿಕೆ, ಸಮಾನ ಮೌಲ್ಯಗಳು, ದೀರ್ಘಕಾಲೀನ ಜಾಗತಿಕ ದೂರದೃಷ್ಟಿಯ ಮೇಲೆ ನಿರ್ಮಾಣವಾಗಿರುವ ಅಪರೂಪದ ಸ್ನೇಹ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.

ಜಂಟಿಯಾಗಿ ಕೆಲಸ

ಜಾಗತಿಕ ಭದ್ರತೆಯಿಂದ ಹಿಡಿದು ಸುಸ್ಥಿರ ಅಭಿವೃದ್ಧಿಯವರೆಗೆ ಇಡೀ ಜಗತ್ತಿಗೆ ಕಾಡುತ್ತಿರುವ ಸಮಸ್ಯೆಗಳಿಗೆ ನಾವು ಜೊತೆಯಾಗಿ ಕೆಲಸ ಮಾಡುತ್ತಿದ್ದೇವೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ನಾವು ಜಂಟಿಯಾಗಿ ಸ್ಥಾಪಿಸಿದ ಅಂತಾರಾಷ್ಟ್ರೀಯ ಸೌರ ಒಕ್ಕೂಟ ಮತ್ತು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಲ್ಲಿ ಬೆಳೆಯುತ್ತಿರುವ ನಮ್ಮ ಸಹಕಾರ ಎಂದು ತಿಳಿಸಿದರು.

ಯುವಕರ ಅದ್ಭುತ ಆವಿಷ್ಕಾರಗಳ ವಿಸ್ತರಣೆ

ಇಡೀ ವಿಶ್ವದ ಸುಸ್ಥಿರ ಭವಿಷ್ಯಕ್ಕಾಗಿ ಭಾರತವು ಇಂದು ಹೊಸ ಆವಿಷ್ಕಾರಗಳನ್ನು ಮಾಡುತ್ತಿದೆ. ಈ ‘ಭಾರತ್ ಇನ್ನೋವೇಟ್ಸ್’ ವೇದಿಕೆಯ ಮೂಲಕ ಭಾರತೀಯ ಯುವಕರ ಅದ್ಭುತ ಆಲೋಚನೆಗಳನ್ನು ಜಾಗತಿಕ ಮಟ್ಟಕ್ಕೆ ವಿಸ್ತರಣೆಯಾಗಲಿದೆ. ಜೊತೆಗೆ ಯುರೋಪ್‌ನ ಬಂಡವಾಳ ಹೂಡಿಕೆಯನ್ನು ಭಾರತಕ್ಕೆ ತರುವ ಒಂದು ಪ್ರಮುಖ ಸೇತುವೆಯಾಗಿ ಕೆಲಸ ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ವ್ಯಕ್ತಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !