June 15, 2026
Monday, June 15, 2026
spot_img

ಆಂಧ್ರದ ಕೃಷ್ಣಾ ನದಿಯಲ್ಲಿ ದೋಣಿ ದುರಂತ: ಮೂವರು ಮಕ್ಕಳು ಸಹಿತ ನಾಲ್ವರು ನೀರುಪಾಲು

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ಕೃಷ್ಣಾ ನದಿಯಲ್ಲಿ ದೋಣಿ ಮುಳುಗಿ ಮೂವರು ಮಕ್ಕಳು ಸೇರಿದಂತೆ ನಾಲ್ವರು ನೀರುಪಾಲಾಗಿರುವ ದುರ್ಘಟನೆ ಭಾನುವಾರ ನಡೆದಿದೆ.

ಮೃತರನ್ನು ಗಂಧಾಮ್​ ಸಂಧ್ಯಾ(9), ಗಂಧಾಮ್​ ಸೈನಿ(10), ಭತುಲಾ ಕಾರ್ತಿಕ್​ (12) ಮತ್ತು ಕೊನತಾ ಚೈತನ್ಯಾ (28) ಎಂದು ಗುರುತಿಸಲಾಗಿದೆ.

ಬೋಟಿಂಗ್​ ತೆರಳಿದ್ದ ಹತ್ತು ಮಂದಿ

ಕೋನೂರ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾದವರಲ್ಲಿ ಹತ್ತು ಮಂದಿ ನದಿಯಲ್ಲಿ ಬೋಟಿಂಗ್​ ತೆರಳಿದ್ದರು. ಈ ವೇಳೆ ನದಿಯ ಮಧ್ಯದಲ್ಲಿ ದೋಣಿಯು ನಿಯಂತ್ರಣ ಕಳೆದುಕೊಂಡ ಮುಳುಗಿದೆ. ತಕ್ಷಣ ಸ್ಥಳೀಯರು ಧಾವಿಸಿ ಆರು ಜನರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಾಲ್ವರು ನೀರಿನಲ್ಲಿ ಮುಳುಗಿದ್ದಾರೆ. ಅವರ ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ.

ಸಂತಾಪ ಸೂಚಿಸಿದ ಮಾಜಿ ಸಿಎಂ ರೆಡ್ಡಿ

ಘಟನೆ ಕುರಿತು ಮಾಜಿ ಮುಖ್ಯಮಂತ್ರಿ ಜಗನ್​ ಮೋಹನ್​ ರೆಡ್ಡಿ ಆಘಾತ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಇದೇ ವೇಳೆ ದುರ್ಘಟನೆಯಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ತಕ್ಷಣ ನೆರವು ಘೋಷಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !