June 15, 2026
Monday, June 15, 2026
spot_img

ಪಶ್ಚಿಮ ಬಂಗಾಳ ರಾಜಕೀಯ ಹೈಡ್ರಾಮಾ: ಎನ್ ಸಿಪಿ ಜೊತೆ ಟಿಎಂಸಿ ಬಂಡಾಯ ಬಣ ವಿಲೀನ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳದ ರಾಜಕೀಯ ಹೈಡ್ರಾಮಾ ತಾರಕ್ಕೇರಿದ್ದು, ತೃಣಮೂಲ ಕಾಂಗ್ರೆಸ್ ಪಕ್ಷದ ವಿರುದ್ಧ ಬಂಡಾಯವೆದ್ದಿದ್ದ 20 ಸಂಸದರು ಕಾಕೋಲಿ ಘೋಷ್ ನೇತೃತ್ವದಲ್ಲಿ ಪ್ರಾದೇಶಿಕ ಪಕ್ಷವಾದ ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಜೊತೆ ವಿಲೀನವಾಗುವುದಾಗಿ ಘೋಷಿಸಿದ್ದಾರೆ.

ಸ್ಪೀಕರ್ ಭೇಟಿಯಾದ ಬಂಡಾಯ ಬಣ

ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ತ್ರಿಪುರಾದ ಬಂಗಾಳಿ ಆಧಾರಿತ ರಾಜಕೀಯ ಪಕ್ಷವಾಗಿದೆ. ಇಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿದ ಬಂಡಾಯ ಸಂಸದರು ತಮ್ಮ ಪತ್ರವನ್ನು ಸಲ್ಲಿಸಿದರು.

ಎನ್‌ಡಿಎ ಒಕ್ಕೂಟಕ್ಕೆ ಬೆಂಬಲ

ಈ ಕುರಿತು ಮಾತನಾಡಿದ ಕಾಕೋಲಿ ಘೋಷ್ ದಸ್ತಿದಾರ್, ತೃಣಮೂಲ ಕಾಂಗ್ರೆಸ್​ನಿಂದ ಆಯ್ಕೆಯಾದ ನಾವು ಇಪ್ಪತ್ತು ಸಂಸದರು, ಇಂದು ಸ್ಪೀಕರ್ ಅವರನ್ನು ಭೇಟಿ ಮಾಡಿ ಪ್ರತ್ಯೇಕವಾಗಿ ಕುಳಿತುಕೊಳ್ಳಲು ವಿನಂತಿಸಿ ಪತ್ರವನ್ನು ಸಲ್ಲಿಸಿದ್ದೇವೆ. ನಾವೆಲ್ಲರೂ ರಾಷ್ಟ್ರೀಯತಾವಾದಿ ನಾಗರಿಕ ಪಕ್ಷದೊಂದಿಗೆ ವಿಲೀನಗೊಳ್ಳುತ್ತಿದ್ದೇವೆ. ನಮಗೆ ಮೂರನೇ ಎರಡರಷ್ಟು ಬಹುಮತವಿದೆ. ಎನ್‌ಡಿಎಯ ಭಾಗವಾಗಿರುತ್ತೇವೆ ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !