June 14, 2026
Sunday, June 14, 2026
spot_img

ಟ್ರಂಪ್ ಜೊತೆ ಮೂವರು ‘ನಿಗೂಢ’ ವ್ಯಕ್ತಿಗಳು: ‘ಏಲಿಯನ್‌’ ಶಂಕೆ ಹುಟ್ಟುಹಾಕುತ್ತಿದೆ ವೈರಲ್ ಫೋಟೋ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಗೆ ಮೂವರು ‘ನಿಗೂಢ’ ವ್ಯಕ್ತಿಗಳು ಇರುವ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಅದರಲ್ಲಿರುವ ಮೂವರು ರಹಸ್ಯ ವ್ಯಕ್ತಿಗಳ ಬಗ್ಗೆ ಜಾಗತಿಕ ಮಟ್ಟದಲ್ಲಿ ಬಾರಿ ಚರ್ಚೆ ಆರಂಭವಾಗಿದೆ.


ಚಿತ್ರದಲ್ಲಿ ಟ್ರಂಪ್ ಅವರ ಪಕ್ಕದಲ್ಲಿ ಉದ್ದನೆಯ ಬಿಳಿ ಕೂದಲು ಮತ್ತು ಒಂದೇ ರೀತಿಯ ಕೆಂಪು ಬಣ್ಣದ ಉಡುಪು ಧರಿಸಿದ ಮೂವರು ವ್ಯಕ್ತಿಗಳು ಕಾಣಿಸಿಕೊಂಡಿದ್ದಾರೆ. ಇವರು ‘ನಾರ್ಡಿಕ್ ಏಲಿಯನ್‌ಗಳು’ ಎಂಬ ಬಗ್ಗೆ ಕೂಡ ಜಾಲತಾಣಗಳಲ್ಲಿ ಚರ್ಚೆ ಆರಂಭವಾಗಿದೆ.

ಜೊತೆಗೆ ಈ ಫೋಟೋ ಕುರಿತು ವಿವಿಧ ರೀತಿಯ ಪ್ರತಿಕ್ರಿಯೆ ಕೂಡ ವ್ಯಕ್ತವಾಗುತ್ತಿದೆ. ಕೆಲವ್ರು ಇದು ಸಾಮಾನ್ಯ ಚಿತ್ರವಲ್ಲ ಎಂದು ವಾದಿಸುತ್ತಿದ್ದರೆ, ಇನ್ನೂ ಕೆಲವರು ಇದು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ಸೃಷ್ಟಿಸಲಾದ ಚಿತ್ರವಾಗಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ನಡುವೆ, ಪತ್ರಕರ್ತ ಜಾನ್ ಸ್ಟೀವರ್ಟ್ ಹೆಸರಿನ ಸಾಮಾಜಿಕ ಜಾಲತಾಣ ಖಾತೆಯೊಂದು, ಈ ಚಿತ್ರವನ್ನು ಮೊದಲು ಶ್ವೇತಭವನದ ಅಧಿಕೃತ ವೇದಿಕೆಯಲ್ಲಿ ಪ್ರಕಟಿಸಿ ನಂತರ ತೆಗೆದುಹಾಕಲಾಗಿದೆ ಎಂದು ಹೇಳಿರುವುದು ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ. ಆದರೆ ಈ ಮಾಹಿತಿಯನ್ನು ಶ್ವೇತಭವನ ದೃಢಪಡಿಸಿಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ ಈ ಹಿಂದೆಯೂ ಟ್ರಂಪ್ ಸೇರಿದಂತೆ ಹಲವು ವಿಶ್ವ ನಾಯಕರನ್ನು ಗುರಿಯಾಗಿಸಿ ‘ರೆಪ್ಟಿಲಿಯನ್’ ಹಾಗೂ ‘ಏಲಿಯನ್’ ಸಂಬಂಧಿತ ಹಲವು ಕತೆಗಳು ವೈರಲ್ ಆಗಿದ್ದವು. ಆದರೆ, ಟ್ರಂಪ್ ಅವರೊಂದಿಗಿನ ಈ ವೈರಲ್ ಫೋಟೋ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಊಹಾಪೋಹಗಳಿಂದಲೇ ಚರ್ಚೆಗೆಬೆಂಕಿ ಸುರಿಯುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !