ರಿಲೇಷನ್‌ಶಿಪ್ ಒಸಿಡಿ (Relationship OCD – ROCD) ಎಂಬುದು ಒಸಿಡಿ ಮಾನಸಿಕ ಕಾಯಿಲೆಯ ಒಂದು ವಿಧವಾಗಿದೆ. ಇಲ್ಲಿ ವ್ಯಕ್ತಿಯು ತನ್ನ ಸಂಗಾತಿ ಅಥವಾ ಪ್ರೀತಿಯ ಸಂಬಂಧದ ಬಗ್ಗೆ ಇಲ್ಲದ ಸಲ್ಲದ ನಕಾರಾತ್ಮಕ ಆಲೋಚನೆಗಳನ್ನು ಪದೇ ಪದೇ ಮಾಡತೊಡಗುತ್ತಾನೆ.
ಮುಖ್ಯ ಲಕ್ಷಣಗಳು ಯಾವುವು?
ಅತಿಯಾದ ಅಪನಂಬಿಕೆ: “ನನ್ನ ಪಾರ್ಟ್‌ನರ್ ನನ್ನನ್ನು ನಿಜವಾಗಿಯೂ ಪ್ರೀತಿಸುತ್ತಿದ್ದಾರಾ?”, “ನಾವು ಇಬ್ಬರು ಮ್ಯಾಚ್ ಆಗ್ತೀವಾ?” ಎಂಬ ಗೊಂದಲ ಕಾಡುವುದು.
ದೋಷ ಹುಡುಕುವುದು: ಸಂಗಾತಿಯ ಸಣ್ಣಪುಟ್ಟ ತಪ್ಪುಗಳನ್ನು ದೊಡ್ಡದಾಗಿ ನೋಡುವುದು.
ಪದೇ ಪದೇ ಸ್ಪಷ್ಟನೆ ಕೇಳುವುದು: ತಾನು ಸುರಕ್ಷಿತವಾಗಿದ್ದೇನೆ ಎಂದು ತಿಳಿಯಲು ಪಾರ್ಟ್‌ನರ್‌ನಿಂದ ಪದೇ ಪದೇ ಪ್ರೀತಿಯ ಪುರಾವೆಗಳನ್ನು ಬಯಸುವುದು.
ಇದಕ್ಕೆ ಕಾರಣ ಮತ್ತು ಪರಿಹಾರವೇನು?
ಹಿಂದಿನ ಕಹಿ ನೆನಪುಗಳು, ಆತ್ಮವಿಶ್ವಾಸದ ಕೊರತೆ ಅಥವಾ ಅತಿಯಾದ ಆತಂಕ ಇದಕ್ಕೆ ಮುಖ್ಯ ಕಾರಣ.
ಇದು ಕೇವಲ ಮೂಡ್ ಆಫ್ ಅಲ್ಲ, ಇದೊಂದು ಮಾನಸಿಕ ಸ್ಥಿತಿ.
ಇದಕ್ಕೆ ಹೆದರಬೇಕಾದ ಅಗತ್ಯವಿಲ್ಲ. ಕಾಪ್ಟಿಟಿವ್ ಬಿಹೇವಿಯರಲ್ ಥೆರಪಿ ಅಥವಾ ಕೌನ್ಸೆಲಿಂಗ್ ಮೂಲಕ ಇದನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಮುಕ್ತವಾಗಿ ಮಾತನಾಡುವುದರಿಂದ ಸಂಬಂಧವನ್ನು ಉಳಿಸಿಕೊಳ್ಳಬಹುದು.



