June 16, 2026
Tuesday, June 16, 2026
spot_img

ಜಿರಳೆಗಳು ಚರಂಡಿಯಲ್ಲೇ ಇರುತ್ತವೆ! ‘ಕಾಕ್ರೋಚ್ ಜನತಾ ಪಾರ್ಟಿ’ ವಿರುದ್ಧ ಪವನ್ ಕಲ್ಯಾಣ್ ಕಿಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶಾದ್ಯಂತ ಭಾರೀ ಸಂಚಲನ ಮೂಡಿಸಿರುವ ‘ಕಾಕ್ರೋಚ್ ಜನತಾ ಪಾರ್ಟಿ’ ಅಭಿಯಾನದ ವಿರುದ್ಧ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ದೆಹಲಿಯಲ್ಲಿ ನಡೆದ ಜನಸೇನಾ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, “ಇದು ಭಾರತದ ಸಮಗ್ರತೆಯನ್ನು ದುರ್ಬಲಗೊಳಿಸುವ ಮತ್ತು ದೇಶವನ್ನು ಒಡೆಯುವ ಸಂಕುಚಿತ ಮನಸ್ಸಿನ ಜನರ ಸಂಚು” ಎಂದು ಕಿಡಿಕಾರಿದ್ದಾರೆ. ಸಣ್ಣ ಇರುವೆ ಕೂಡ ದೊಡ್ಡ ಹಾವನ್ನು ಕೊಲ್ಲಬಲ್ಲದು, ಹಾಗಾಗಿ ಇಂತಹ ಆಲೋಚನೆಗಳಿಗೆ ಸಾರ್ವಜನಿಕರು ಬಲಿಯಾಗಬಾರದು ಎಂದು ಅವರು ಎಚ್ಚರಿಸಿದ್ದಾರೆ.

‘ಜಿರಳೆಗಳು ಚರಂಡಿಯಲ್ಲೇ ಇರುತ್ತವೆ’ ಎಂದ ಆಂಧ್ರ ಡಿಸಿಎಂ!

ಇದಕ್ಕೂ ಮುನ್ನ ‘ಎಎನ್‌ಐ’ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ್ದ ಪವನ್ ಕಲ್ಯಾಣ್, ಪ್ರತಿಭಟನಾಕಾರರನ್ನು ಲೇವಡಿ ಮಾಡಿದ್ದರು. “ಜಿರಳೆಗಳು ಯಾವಾಗಲೂ ಚರಂಡಿಯಲ್ಲೇ ಇರುತ್ತವೆ. ಅವರಿಗೆ ಯಾಕೆ ಇಷ್ಟೊಂದು ಕೋಪ ಇದೆಯೋ ಗೊತ್ತಿಲ್ಲ, ಬಹುಶಃ ಅವರ ನೋವು ಏನೆಂದು ನನಗೆ ಅರ್ಥವಾಗುತ್ತದೆ” ಎಂದು ವ್ಯಂಗ್ಯವಾಡಿದ್ದರು.

ಪವನ್ ಕಲ್ಯಾಣ್‌ಗೆ ನಟ ಪ್ರಕಾಶ್ ರಾಜ್ ತಿರುಗೇಟು

ಇತ್ತೀಚೆಗೆ ಈ ವಿಭಿನ್ನ ಚಳವಳಿಯನ್ನು ಬೆಂಬಲಿಸಿ ಮಾತನಾಡಿದ್ದ ಬಹುಭಾಷಾ ನಟ ಪ್ರಕಾಶ್ ರಾಜ್, ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದರು. “ನಮ್ಮನ್ನು ಪಾಕಿಸ್ತಾನಿಗಳು, ಭಯೋತ್ಪಾದಕರು ಅಥವಾ ಜಿರಳೆಗಳು (ಕಾಕ್ರೋಚ್) ಎಂದು ಕರೆದರೂ ನಾವು ಹೆದರುವುದಿಲ್ಲ. ಜನರಿಂದ ಆಯ್ಕೆಯಾದ ನಾಯಕರು ರಾಜಕೀಯ ಮಾಡುವುದನ್ನು ಬಿಟ್ಟು ಯುವಕರಿಗೆ ಉದ್ಯೋಗ ನೀಡಬೇಕು. ದೇಶದ ಯುವ ಸಮೂಹ ತನ್ನ ಹಕ್ಕಿಗಾಗಿ ಹೋರಾಡಲು ನಿರ್ಧರಿಸಿದೆ” ಎಂದು ಪ್ರಕಾಶ್ ರಾಜ್ ಸ್ಪಷ್ಟಪಡಿಸಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !