June 16, 2026
Tuesday, June 16, 2026
spot_img

ಕ್ಯಾಪ್ಟನ್ ರೂಟ್ ಕಮಾಲ್: ನ್ಯೂಝಿಲೆಂಡ್ ವಿರುದ್ಧ ವಿಶ್ವ ದಾಖಲೆಯ ಹೊಸ್ತಿಲಲ್ಲಿ ಇಂಗ್ಲೆಂಡ್ ರನ್ ಮಷೀನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನ್ಯೂಝಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಅನುಭವಿ ಬ್ಯಾಟರ್ ಜೋ ರೂಟ್ ನಾಯಕನಾಗಿ ಕಣಕ್ಕಿಳಿಯುತ್ತಿದ್ದು, ಹಲವು ಅಪರೂಪದ ದಾಖಲೆಗಳನ್ನು ಬರೆಯುವ ಹೊಸ್ತಿಲಲ್ಲಿದ್ದಾರೆ. ತಡರಾತ್ರಿಯ ಕರ್ಫ್ಯೂ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಬೆನ್ ಸ್ಟೋಕ್ಸ್ ಅಮಾನತುಗೊಂಡಿದ್ದು, ರೂಟ್ ಹಂಗಾಮಿ ನಾಯಕತ್ವ ವಹಿಸಿಕೊಂಡಿದ್ದಾರೆ.

ಕಿವೀಸ್ ವಿರುದ್ಧ 2,000 ಟೆಸ್ಟ್ ರನ್

ನ್ಯೂಝಿಲೆಂಡ್ ವಿರುದ್ಧ 22 ಟೆಸ್ಟ್ ಪಂದ್ಯಗಳಿಂದ 1,934 ರನ್ ಗಳಿಸಿರುವ ಜೋ ರೂಟ್, ಇನ್ನು 66 ರನ್ ಗಳಿಸಿದರೆ ಕಿವೀಸ್ ವಿರುದ್ಧ ಟೆಸ್ಟ್ ಇತಿಹಾಸದಲ್ಲೇ 2,000 ರನ್ ಪೂರೈಸಿದ ವಿಶ್ವದ ಮೊದಲ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. ಈಗಾಗಲೇ ಅವರು ಜಾವೇದ್ ಮಿಯಾಂದಾದ್ ಅವರ 31 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ.

ಇಂಗ್ಲೆಂಡ್ ಮಣ್ಣಿನಲ್ಲಿ 1,000 ರನ್

ಸ್ವದೇಶಿ ಪಿಚ್‌ಗಳಲ್ಲಿ ನ್ಯೂಝಿಲೆಂಡ್ ವಿರುದ್ಧ ಈಗಾಗಲೇ 928 ರನ್ ಕಲೆಹಾಕಿರುವ ರೂಟ್‌ಗೆ 1,000 ರನ್‌ಗಳ ಗಡಿ ತಲುಪಲು ಕೇವಲ 72 ರನ್‌ಗಳ ಅವಶ್ಯಕತೆಯಿದೆ.

14,000 ಟೆಸ್ಟ್ ರನ್‌ಗಳ ಮಹಾ ಮೈಲಿಗಲ್ಲು

ಟೆಸ್ಟ್ ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ಶ್ರೇಷ್ಠ ಬ್ಯಾಟರ್ ಎನಿಸಿಕೊಂಡಿರುವ ರೂಟ್, ತಮ್ಮ ವೃತ್ತಿಜೀವನದಲ್ಲಿ 14,000 ರನ್ ಪೂರೈಸಲು ಕೇವಲ 48 ರನ್ ಗಳಿಸಬೇಕಿದೆ. ಪ್ರಸ್ತುತ ಅವರು 13,952 ರನ್ ಗಳಿಸಿದ್ದಾರೆ.

ನಾಯಕನಾಗಿ 500 ರನ್ ಸಾಧನೆ

ಕಿವೀಸ್ ವಿರುದ್ಧ ನಾಯಕನಾಗಿ ಆಡಿರುವ 6 ಪಂದ್ಯಗಳಲ್ಲಿ 478 ರನ್ ಗಳಿಸಿರುವ ರೂಟ್, ಇನ್ನು 22 ರನ್ ಗಳಿಸಿದರೆ ನ್ಯೂಝಿಲೆಂಡ್ ವಿರುದ್ಧ 500 ರನ್ ಕಲೆಹಾಕಿದ ಇಂಗ್ಲೆಂಡ್‌ನ ಯಶಸ್ವಿ ನಾಯಕ ಎನಿಸಿಕೊಳ್ಳಲಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !