October 9, 2026
Friday, October 9, 2026
spot_img

CINE | ಇದೇನಿದು ಹೊಸಾ ಸುದ್ದಿ? ಕಲ್ಕಿ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಜಾಗಕ್ಕೆ ಆಲಿಯಾ ಭಟ್‌?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಲ್ಕಿ 2898 ಎಡಿ ಸಿನಿಮಾದ ನೆಕ್ಸ್ಟ್‌ ಪಾರ್ಟ್‌ನಲ್ಲಿ ದೀಪಿಕಾ ಪಡುಕೋಣೆ ನಟಿಸೋದಿಲ್ಲ ಅನ್ನೋದು ಹಳೇ ಸುದ್ದಿ. ಇದೀಗ ದೀಪಿಕಾ ಪಾತ್ರಕ್ಕೆ ಆಲಿಯಾ ಭಟ್‌ ಆಯ್ಕೆಯಾಗಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ.

ಎಲ್ಲರ ತರ ನಾವೂ ಎಂಟು ಗಂಟೆ ಮಾತ್ರ ಕೆಲಸ ಮಾಡ್ತೀವಿ ಎಂದು ಸ್ಟ್ರಾಂಗ್‌ ಆಗಿ ನಟಿ ದೀಪಿಕಾ ಹೇಳಿದ್ದರು. ಇದರಿಂದ ಸಿನಿಮಾದ ಎರಡನೇ ಭಾಗದಲ್ಲಿ ಅವರನ್ನು ಕೈಬಿಡಲಾಗಿತ್ತು. ಇದರ ಜೊತೆ ಪ್ರಭಾಸ್‌ ನಟನೆಯ ಸ್ಪಿರಿಟ್‌ ಸಿನಿಮಾದಿಂದಲೂ ದೀಪಿಕಾ ಹೊರಕ್ಕೆ ಬಂದಿದ್ದರು.

ಈಗ ಆಲಿಯಾ ಭಟ್‌ ಸಿನಿ ತಂಡವನ್ನು ಸೇರ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆಲಿಯಾಗೆ ಕೂಡ ಮಗಳಿದ್ದು, ಎಂಟು ಗಂಟೆಗೂ ಹೆಚ್ಚಿನ ಸಮಯದ ಶೂಟಿಂಗ್‌ನ್ನು ಮ್ಯಾನೇಜ್‌ ಮಾಡ್ತಾರಾ ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ. ಸದ್ಯಕ್ಕೆ ದೀಪಿಕಾ ಪಾತ್ರಕ್ಕೆ ಆಲಿಯಾ ಭಟ್‌ ಹಾಗೂ ಸಾಯಿ ಪಲ್ಲವಿ ಹೆಸರು ಕೇಳಿಸುತ್ತಿದ್ದು, ಅಫಿಶಿಯಲ್‌ ಅನೌನ್ಸ್‌ಮೆಂಟ್‌ ಬಾಕಿ ಇದೆ.

Must Read