September 20, 2026
Sunday, September 20, 2026
spot_img

‘ಬಾಸ್’ಗೆ ಮತ್ತೆ ಕಾನೂನು ಕಾಟ: ದರ್ಶನ್ ಕುಟುಂಬದ ಅರ್ಜಿ ಹೈಕೋರ್ಟ್ ಅಂಗಳಕ್ಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಡುಗಡೆಗೂ ಮುನ್ನವೇ ಸಾಕಷ್ಟು ಚರ್ಚೆಗೆ ಕಾರಣವಾಗಿರುವ ‘ಬಾಸ್’ ಚಿತ್ರದ ಸುತ್ತ ಮತ್ತೊಮ್ಮೆ ಕಾನೂನು ವಿವಾದ ಸೃಷ್ಟಿಯಾಗಿದೆ. ನಿರ್ದೇಶಕ ವಿ. ಲವ್ ಸಾರಥ್ಯದ ಈ ಚಿತ್ರದಲ್ಲಿ ತನಿಷ್ ಶಿವಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಟೀಸರ್ ಬಿಡುಗಡೆಯಾದ ಬಳಿಕ ಚಿತ್ರದ ಕಥೆ ಕೆಲವು ನೈಜ ಘಟನೆಗಳೊಂದಿಗೆ ಹೋಲಿಕೆ ಹೊಂದಿದೆ ಎಂಬ ಚರ್ಚೆ ಜೋರಾಗಿತ್ತು.

ಹೈಕೋರ್ಟ್‌ಗೆ ಮೊರೆ ಹೋದ ದರ್ಶನ್ ಕುಟುಂಬ

ಈ ಹಿನ್ನೆಲೆಯಲ್ಲಿ ನಟ ದರ್ಶನ್ ಹಾಗೂ ವಿಜಯಲಕ್ಷ್ಮಿ ದರ್ಶನ್ ಅವರು ಚಿತ್ರದ ಪ್ರದರ್ಶನಕ್ಕೆ ತಡೆ ನೀಡುವಂತೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಈ ಹಿಂದೆ ಸೆಷನ್ಸ್ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ತಿರಸ್ಕೃತವಾಗಿದ್ದರೂ, ಇದೀಗ ಪ್ರಕರಣ ಹೈಕೋರ್ಟ್ ಅಂಗಳಕ್ಕೆ ತಲುಪಿದೆ.

ಇದನ್ನೂ ಓದಿ:

ರಿಲೀಸ್‌ಗೆ ಮುನ್ನ ಹೆಚ್ಚಿದ ಕುತೂಹಲ

ಜೂನ್ 19ರಂದು ಸಿನಿಮಾ ಬಿಡುಗಡೆಗೊಳ್ಳುವಂತೆ ಚಿತ್ರತಂಡ ಸಕಲ ಸಿದ್ಧತೆ ನಡೆಸಿದ್ದು, ಪ್ರಚಾರ ಕಾರ್ಯವೂ ಭರದಿಂದ ಸಾಗುತ್ತಿದೆ. ಆದರೆ ಹೈಕೋರ್ಟ್‌ನಲ್ಲಿ ನಡೆಯಲಿರುವ ವಿಚಾರಣೆಯ ಫಲಿತಾಂಶವೇ ಚಿತ್ರದ ಭವಿಷ್ಯವನ್ನು ನಿರ್ಧರಿಸಲಿದೆ.

ಚಿತ್ರತಂಡದ ಸ್ಪಷ್ಟನೆ

ಚಿತ್ರದ ಕಥೆ ಯಾವುದೇ ವ್ಯಕ್ತಿಯ ಜೀವನವನ್ನು ಆಧರಿಸಿಲ್ಲ ಎಂದು ಚಿತ್ರತಂಡ ಆರಂಭದಿಂದಲೇ ಹೇಳುತ್ತ ಬಂದಿದೆ. ಇದೇ ವೇಳೆ ಸೆನ್ಸಾರ್ ಮಂಡಳಿಯಿಂದ ಚಿತ್ರಕ್ಕೆ ಯು/ಎ ಪ್ರಮಾಣಪತ್ರವೂ ದೊರೆತಿದೆ. ಈಗ ಹೈಕೋರ್ಟ್ ಯಾವ ತೀರ್ಪು ನೀಡುತ್ತದೆ ಎಂಬುದರತ್ತ ಸಿನಿಪ್ರಿಯರು ಹಾಗೂ ಅಭಿಮಾನಿಗಳ ಗಮನ ನೆಟ್ಟಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !