September 2, 2026
Wednesday, September 2, 2026
spot_img

CINE | ಆಲ್ಫಾ ಟ್ರೇಲರ್ ಔಟ್: ಆಲಿಯಾ ಭಟ್ ಆ್ಯಕ್ಷನ್‌ಗೆ ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯಶ್ ರಾಜ್ ಫಿಲ್ಮ್ಸ್ ಸ್ಪೈ ಯೂನಿವರ್ಸ್‌ನ ಬಹುನಿರೀಕ್ಷಿತ ‘ಆಲ್ಫಾ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ. ಆಲಿಯಾ ಭಟ್ ಮತ್ತು ಶಾರ್ವರಿ ಮುಖ್ಯ ಭೂಮಿಕೆಯಲ್ಲಿರುವ ಈ ಆ್ಯಕ್ಷನ್ ಥ್ರಿಲ್ಲರ್ ಝಲಕ್‌ಗೆ ಇಂಟರ್ನೆಟ್‌ನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಆಲಿಯಾ ಆ್ಯಕ್ಷನ್ ಅವತಾರಕ್ಕೆ ಟೀಕೆ

ಭರ್ಜರಿ ಆ್ಯಕ್ಷನ್, ಸ್ಟೈಲಿಶ್ ಮೇಕಿಂಗ್ ಮತ್ತು ಸ್ಪೈ ಥ್ರಿಲ್ಲರ್ ಕಥಾಹಂದರ ಹೊಂದಿದ್ದರೂ, ಆಲಿಯಾ ಭಟ್ ಅವರ ಆ್ಯಕ್ಷನ್ ಪಾತ್ರವನ್ನು ಹಲವು ನೆಟ್ಟಿಗರು ಒಪ್ಪಿಕೊಳ್ಳುತ್ತಿಲ್ಲ. ಆಲಿಯಾಗೆ ಇಂತಹ ರಗಡ್ ಪಾತ್ರಗಳು ಸೂಟ್ ಆಗುವುದಿಲ್ಲ ಮತ್ತು ಇಲ್ಲಿನ ಸ್ಟಂಟ್‌ಗಳು ನೈಜವಾಗಿ ಕಾಣುತ್ತಿಲ್ಲ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರಂತೂ ಇದು ಸಿನಿಮಾದ ಟ್ರೇಲರ್‌ನಂತೆ ಇರದೆ, ಯಾವುದೋ ‘ಎನರ್ಜಿ ಡ್ರಿಂಕ್ ಜಾಹೀರಾತು’ ತರಹ ಇದೆ ಎಂದು ಲೇವಡಿ ಮಾಡಿದ್ದಾರೆ. ಅಲ್ಲದೆ, ಟ್ರೇಲರ್‌ನಲ್ಲೇ ಕಥೆಯ ಬಹುಭಾಗವನ್ನು ರಿವೀಲ್ ಮಾಡಲಾಗಿದ್ದು, ಚಿತ್ರದ ಮೇಲಿನ ಕುತೂಹಲ ಕಮ್ಮಿಯಾಗಿದೆ ಎಂಬ ಬೇಸರವೂ ವ್ಯಕ್ತವಾಗಿದೆ.

ಶಾರ್ವರಿ, ಬಾಬಿ ಡಿಯೋಲ್‌ಗೆ ಜೈಕಾರ!

ನಕಾರಾತ್ಮಕ ಕಾಮೆಂಟ್‌ಗಳ ನಡುವೆಯೂ, ನಟಿ ಶಾರ್ವರಿ ಅವರ ಪವರ್‌ಫುಲ್ ಎಂಟ್ರಿ ಮತ್ತು ಆ್ಯಕ್ಷನ್ ದೃಶ್ಯಗಳಿಗೆ ಭಾರಿ ಮೆಚ್ಚುಗೆ ಸಿಗುತ್ತಿದೆ. ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಾಬಿ ಡಿಯೋಲ್ ಲುಕ್ ಕೂಡ ಸಿನಿಪ್ರಿಯರ ಗಮನ ಸೆಳೆದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !