June 18, 2026
Thursday, June 18, 2026
spot_img

ನೀಟ್ ಒತ್ತಡಕ್ಕೆ ಮತ್ತೊಂದು ಜೀವ ಬ*ಲಿ?: ಡೆತ್‌ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹ*ತ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ನೀಟ್ ಮರುಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ 23 ವರ್ಷದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ರಿಯಾ ಕುಮಾರಿ ಎಂಬ ಯುವತಿ ತನ್ನ ಕೋಣೆಯಲ್ಲಿ ಡೆತ್‌ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಘಟನೆ ಕುಟುಂಬಸ್ಥರನ್ನು ಆಘಾತಕ್ಕೀಡು ಮಾಡಿದೆ.

ಶೈಕ್ಷಣಿಕ ಸಾಧನೆಯಲ್ಲಿ ಮುಂಚೂಣಿಯಲ್ಲಿದ್ದ ರಿಯಾ

ರಿಯಾ ಕುಮಾರಿ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದು, ಪಿಯುಸಿಯಲ್ಲಿ ಶೇ.96.7 ಅಂಕ ಗಳಿಸಿ ಕಾಲೇಜು ಟಾಪರ್ ಆಗಿ ಹೊರಹೊಮ್ಮಿದ್ದಳು. ವೈದ್ಯೆಯಾಗುವ ಕನಸಿನೊಂದಿಗೆ ನೀಟ್ ಮರುಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಳು ಎಂದು ಕುಟುಂಬದವರು ತಿಳಿಸಿದ್ದಾರೆ.

ತಾಯಿ ಕರೆದಾಗ ಬಯಲಾದ ದುರಂತ

ಘಟನೆ ನಡೆದ ದಿನ ರಿಯಾಗೆ ಊಟಕ್ಕೆ ಕರೆಯಲು ತಾಯಿ ಹೋದಾಗ ಬಾಗಿಲು ತೆರೆಯಲಿಲ್ಲ. ಅನುಮಾನಗೊಂಡ ಕುಟುಂಬಸ್ಥರು ಕೋಣೆ ತೆರೆದು ನೋಡಿದಾಗ ರಿಯಾ ಮೃತಪಟ್ಟಿರುವುದು ಪತ್ತೆಯಾಯಿತು. ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ:

ಡೆತ್‌ನೋಟ್‌ನಲ್ಲಿ ಭಾವುಕ ಸಾಲುಗಳು

ರಿಯಾ ಬರೆದಿದ್ದ ಪತ್ರದಲ್ಲಿ, “ಅಮ್ಮ-ಅಪ್ಪ ಐ ಲವ್ ಯೂ… ನಿಮಗೆ ಭಾರವಾಗಿದ್ದಕ್ಕೆ ಕ್ಷಮಿಸಿ. ಇದು ಯಾರ ತಪ್ಪೂ ಅಲ್ಲ, ನನ್ನ ಅಸಮರ್ಥತೆ. ಕ್ಷಮಿಸಿ” ಎಂದು ಉಲ್ಲೇಖಿಸಿದ್ದಾಳೆ ಎನ್ನಲಾಗಿದೆ.

ಒತ್ತಡವೇ ಕಾರಣ ಎಂಬ ಶಂಕೆ

ಡೆಹ್ರಾಡೂನ್ ಸರ್ಕಲ್ ಅಧಿಕಾರಿ ಅಂಕಿತ್ ಕಂಡಾರಿ ಮಾತನಾಡಿ, ಮರುಪರೀಕ್ಷೆಯ ಸಿದ್ಧತೆಯ ವೇಳೆ ಉಂಟಾದ ಒತ್ತಡದಿಂದ ಈ ನಿರ್ಧಾರ ತೆಗೆದುಕೊಂಡಿರಬಹುದೆಂಬ ಅನುಮಾನವಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !