September 23, 2026
Wednesday, September 23, 2026
spot_img

ಒಪ್ಪಂದ ಆಯ್ತು, ರೂಲ್ಸ್ ಫಾಲೋ ಮಾಡಿಲ್ಲಾಂದ್ರೆ…. ಇರಾನ್‌ಗೆ ವಾರ್ನಿಂಗ್ ಕೊಟ್ಟ ಅಮೆರಿಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದಕ್ಕೆ ಅಧಿಕೃತ ರೂಪ ಸಿಕ್ಕಿದೆ. ಆದರೆ ಒಪ್ಪಂದದ ಬಳಿಕವೂ ಅಮೆರಿಕ ತನ್ನ ಕಠಿಣ ನಿಲುವನ್ನು ಮುಂದುವರಿಸಿದ್ದು, ಷರತ್ತುಗಳ ಉಲ್ಲಂಘನೆ ನಡೆದರೆ ಮತ್ತೆ ನಿರ್ಬಂಧ ಹಾಗೂ ಸೇನಾ ಕ್ರಮಕ್ಕೆ ಮುಂದಾಗುವುದಾಗಿ ಸ್ಪಷ್ಟಪಡಿಸಿದೆ.

ಒಪ್ಪಂದ ಪಾಲನೆಗೆ ಕಾಲಮಿತಿ

ನ್ಯಾಟೊ ರಕ್ಷಣಾ ಸಚಿವರ ಸಭೆಯ ಬಳಿಕ ಬ್ರಸ್ಸೆಲ್ಸ್‌ನಲ್ಲಿ ಮಾತನಾಡಿದ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್, ನಿಗದಿತ ಅವಧಿಯೊಳಗೆ ಇರಾನ್ ತನ್ನ ಬದ್ಧತೆಗಳನ್ನು ಪೂರ್ಣಗೊಳಿಸಬೇಕೆಂದು ಹೇಳಿದ್ದಾರೆ. ಒಪ್ಪಂದದ ನಿಯಮಗಳನ್ನು ಪಾಲಿಸದಿದ್ದರೆ ಅಮೆರಿಕ ಮರು ಕ್ರಮ ಕೈಗೊಳ್ಳಲು ಸಿದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ:

ನಿರ್ಬಂಧ ಮರುಜಾರಿಗೆ ಸಿದ್ಧತೆ

ಇರಾನ್ ಒಪ್ಪಂದ ಉಲ್ಲಂಘಿಸಿದರೆ ಕಠಿಣ ಆರ್ಥಿಕ ನಿರ್ಬಂಧಗಳು ಹಾಗೂ ಸಮುದ್ರ ಮಾರ್ಗದ ತಡೆ ವ್ಯವಸ್ಥೆಯನ್ನು ಮತ್ತೆ ಜಾರಿಗೊಳಿಸುವ ಸಾಮರ್ಥ್ಯ ಅಮೆರಿಕಕ್ಕಿದೆ ಎಂದು ಹೆಗ್ಸೆತ್ ಎಚ್ಚರಿಕೆ ನೀಡಿದ್ದಾರೆ.

ವಿಶ್ವದ ಗಮನ ಈಗ ಇರಾನ್ ನಡೆ ಮೇಲೆ

ಶಾಂತಿ ಒಪ್ಪಂದದಿಂದ ಉದ್ವಿಗ್ನತೆ ಕಡಿಮೆಯಾಗುವ ನಿರೀಕ್ಷೆ ಮೂಡಿದ್ದರೂ, ಮುಂದಿನ ಬೆಳವಣಿಗೆಗಳು ಇರಾನ್‌ನ ಕ್ರಮಗಳ ಮೇಲೆ ಅವಲಂಬಿತವಾಗಿವೆ. ಜಾಗತಿಕ ಸಮುದಾಯವೂ ಈಗ ಒಪ್ಪಂದದ ಅನುಷ್ಠಾನದತ್ತ ಕಣ್ಣಿಟ್ಟಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !