June 18, 2026
Thursday, June 18, 2026
spot_img

ಟೀಮ್ ಇಂಡಿಯಾಗೆ ಭಾರಿ ಆಘಾತ: ಕನ್ನಡತಿ ಶ್ರೇಯಾಂಕಾ ಪಾಟೀಲ್‌ಗೆ ಗಂಭೀರ ಗಾ*ಯ, ಮುಂದಿನ ಪಂದ್ಯಕ್ಕೆ ಡೌಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದ ಭಾರತದ ಯುವ ಆಫ್-ಸ್ಪಿನ್ನರ್, ಕನ್ನಡತಿ ಶ್ರೇಯಾಂಕಾ ಪಾಟೀಲ್ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಮುಂಬರುವ ಪ್ರಮುಖ ಪಂದ್ಯಗಳಿಗೆ ಅಲಭ್ಯರಾಗುವ ಆತಂಕ ಇದೀಗ ಎದುರಾಗಿದೆ.

ಮೈದಾನದಲ್ಲೇ ಕುಸಿದುಬಿದ್ದ ಆಟಗಾರ್ತಿ:

ಪಂದ್ಯದ 6ನೇ ಓವರ್‌ನಲ್ಲಿ ಬೌಂಡರಿ ಲೈನ್ ಬಳಿ ಫೀಲ್ಡಿಂಗ್ ಮಾಡುತ್ತಿದ್ದಾಗ ಶ್ರೇಯಾಂಕಾ   ಬಲಗಾಲಿನ ಆಂಕೆಲ್ ತೀವ್ರವಾಗಿ ಮಡಚಿಕೊಂಡಿದೆ. ನೋವಿನಿಂದ ಮೈದಾನದಲ್ಲೇ ಕುಸಿದುಬಿದ್ದ ಅವರಿಗೆ ಎದ್ದು ನಿಲ್ಲಲು ಸಾಧ್ಯವಾಗಲಿಲ್ಲ. ತಕ್ಷಣವೇ ಮೈದಾನಕ್ಕೆ ಧಾವಿಸಿದ ವೈದ್ಯಕೀಯ ಸಿಬ್ಬಂದಿ, ಸ್ಟ್ರೆಚರ್ ಬಳಸಿ ಅವರನ್ನು ಡ್ರೆಸ್ಸಿಂಗ್ ರೂಮ್‌ಗೆ ಕರೆದೊಯ್ದರು. ಇದು ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ.

ಇದನ್ನೂ ಓದಿ:

ಮುಂದಿನ ಪಂದ್ಯಕ್ಕೆ ಅಲಭ್ಯತೆಯ ಭೀತಿ:

ಸದ್ಯಕ್ಕೆ ಶ್ರೇಯಾಂಕಾನನ್ನು ಹೆಚ್ಚಿನ ತಪಾಸಣೆಗಾಗಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಸ್ಕ್ಯಾನಿಂಗ್‌ಗೆ ಒಳಪಡಿಸಲಾಗಿದೆ ಎಂದು ಸಹ-ಆಟಗಾರ್ತಿ ಶಫಾಲಿ ವರ್ಮಾ ಖಚಿತಪಡಿಸಿದ್ದಾರೆ. ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಹೈ-ವೋಲ್ಟೇಜ್ ಪಂದ್ಯದಿಂದ ಶ್ರೇಯಾಂಕಾ ಹೊರಗುಳಿಯುವುದು ಬಹುತೇಕ ಖಚಿತ ಎನ್ನಲಾಗಿದೆ. ಗಾಯದ ತೀವ್ರತೆ ಹೆಚ್ಚಿದ್ದರೆ ಅವರು ಇಡೀ ವಿಶ್ವಕಪ್ ಟೂರ್ನಿಯಿಂದಲೇ ಹೊರಬೀಳುವ ಸಾಧ್ಯತೆಯೂ ಇದೆ ಎಂದು ಬಿಸಿಸಿಐ (BCCI) ಮೂಲಗಳು ತಿಳಿಸಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !