August 13, 2026
Thursday, August 13, 2026
spot_img

ನೀಟ್‌ ಪರೀಕ್ಷಾರ್ಥಿಗಳಿಗೆ ತೊಂದರೆಯಾಗಬಾರದೆಂದು ಏರ್‌ಪೋರ್ಟ್‌ನಲ್ಲೇ ಮುಕ್ಕಾಲು ಗಂಟೆ ಕಾದ ಪ್ರಧಾನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಂದು ಪ್ರಧಾನಿ ಮೋದಿ ದೆಹಲಿಯ ಏರ್‌ಪೋರ್ಟ್‌ನಿಂದ ತಮ್ಮ ಮನೆಯ ಕಡೆ ತೆರಳಬೇಕಿತ್ತು. ಆದರೆ ನೀಟ್‌ ಪರೀಕ್ಷಾರ್ಥಿಗಳಿಗೆ ತೊಂದರೆಯಾಗಬಾರದೆಂದು ಏರ್‌ಪೋರ್ಟ್‌ನಲ್ಲಿಯೇ 45 ನಿಮಿಷ ಕಾದಿದ್ದಾರೆ.

ನೀಟ್‌ ಯುಜಿ ಮರುಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಸಂಚಾರದ ವೇಳೆ ಯಾವುದೇ ರೀತಿಯ ತೊಂದರೆ ಆಗಬಾರದು ಎಂದು ಪ್ರಧಾನಿ 45 ನಿಮಿಷ ಏರ್‌ಪೋರ್ಟ್‌ನಲ್ಲೇ ಕಾದಿದ್ದಾರೆ. ಮಧ್ಯಾಹ್ನ ಸುಮಾರು 1:15ಕ್ಕೆ ದೆಹಲಿ ಏರ್‌ಪೋರ್ಟ್‌ಗೆ ಬಂದಿಳಿದ ಪ್ರಧಾನಿ ಮೋದಿಗೆ ಇನ್ಯಾವ ಕಾರ್ಯಕ್ರಮಗಳೂ ಇರಲಿಲ್ಲ. ಸೀದ ಮನೆಗೆ ತೆರಳಲು ಸಜ್ಜಾಗಿದ್ದರು. ಪ್ರಧಾನಿ ಮೋದಿ ಚಲಿಸುವ ಮಾರ್ಗದಲ್ಲಿ ಸಂಚಾರ ನಿಯಂತ್ರಣ ಹಾಗೂ ತಾತ್ಕಾಲಿಕ ನಿರ್ಬಂಧ ಹಾಕಲಾಗುತ್ತದೆ. ಮಧ್ಯಾಹ್ನ 2 ಗಂಟೆಗೆ ನೀಟ್‌ ಪರೀಕ್ಷೆ ಆರಂಭವಾಗಬೇಕಿದ್ದ ಕಾರಣ ಸಾವಿರಾರು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ತೆರಳುತ್ತಿದ್ದ ಸಮಯದಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗಬಾರದು ಎಂಬ ಕಾರಣದಿಂದ ಅವರು ವಿಮಾನ ನಿಲ್ದಾಣದಲ್ಲೇ ಉಳಿದರು.

ಮಧ್ಯಾಹ್ನ ಎರಡು ಗಂಟೆ ನಂತರ ಪರೀಕ್ಷೆ ಆರಂಭವಾಗಿದೆ. ಆನಂತರ ಪ್ರಧಾನಿ ತಮ್ಮ ನಿವಾಸಕ್ಕೆ ತೆರಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !