August 12, 2026
Wednesday, August 12, 2026
spot_img

ಕೇವಲ 10 ನಿಮಿಷದಲ್ಲಿ ಮಾಡಿ ಸಾಫ್ಟ್ ಇನ್‌ಸ್ಟಂಟ್ ‘ರವೆ ಅಪ್ಪಂ’: ನೆನೆಸುವ ಹಂಗಿಲ್ಲ, ಎಣ್ಣೆಯೂ ಬೇಕಿಲ್ಲ!

ರವೆ ಅಪ್ಪಂ ಎಣ್ಣೆಯಿಲ್ಲದೆ ಕೇವಲ 10 ನಿಮಿಷಗಳಲ್ಲಿ ತಯಾರಿಸಬಹುದಾದ ಅತ್ಯಂತ ಸುಲಭ ಮತ್ತು ಮೃದುವಾದ ಸ್ನ್ಯಾಕ್ಸ್ ಆಗಿದೆ. ಇದನ್ನು ನೆನೆಸುವ ಅಥವಾ ಹುದುಗು ಬರಿಸುವ ಅಗತ್ಯವಿರುವುದಿಲ್ಲ.

ಬೇಕಾಗುವ ಸಾಮಗ್ರಿಗಳು:

ಚಿರೋಟಿ ರವೆ

ಗಟ್ಟಿ ಮೊಸರು

ನೀರು

ಸಕ್ಕರೆ

ಅಡುಗೆ ಸೋಡಾ

ಉಪ್ಪು

ಇದನ್ನೂ ಓದಿ:

ಮಾಡುವ ವಿಧಾನ:

ಒಂದು ಮಿಕ್ಸಿ ಜಾರ್‌ಗೆ ರವೆ, ಮೊಸರು, ಸಕ್ಕರೆ, ಉಪ್ಪು ಮತ್ತು ಮುಕ್ಕಾಲು ಕಪ್ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು. ರುಬ್ಬಿದ ಹಿಟ್ಟನ್ನು ಒಂದು ಬೌಲ್‌ಗೆ ಹಾಕಿ 5 ನಿಮಿಷಗಳ ಕಾಲ ಹಾಗೇ ಬಿಟ್ಟು. ಅಪ್ಪಂ ಮಾಡುವ ಮುನ್ನ, ಈ ಹಿಟ್ಟಿಗೆ ಅರ್ಧ ಚಮಚ ಅಡುಗೆ ಸೋಡಾ ಸೇರಿಸಿ, ಅದರ ಮೇಲೆ ಒಂದು ಚಮಚ ನೀರು ಹಾಕಿ ಹಗುರವಾಗಿ ಮಿಕ್ಸ್ ಮಾಡಿಬನೇಕು.

ನಂತರ ನಾನ್‌ಸ್ಟಿಕ್ ತವಾವನ್ನು ಮಧ್ಯಮ ಉರಿಯಲ್ಲಿ ಕಾಯಿಸಿಕೊಂಡು, ತವಾ ಕಾದ ನಂತರ, ಒಂದು ದೊಡ್ಡ ಸೌಟು ಹಿಟ್ಟನ್ನು ತೆಗೆದುಕೊಂಡು ತವಾದ ಮಧ್ಯಭಾಗಕ್ಕೆ ಹಾಕಿ. ತಟ್ಟೆ ಮುಚ್ಚಿ 1 ನಿಮಿಷ ಬೇಯಿಸಿ. ಮೇಲ್ಭಾಗ ಪೂರ್ತಿ ಬೆಂದು ಒಣಗಿದ ತಕ್ಷಣ ಅಪ್ಪಂ ಅನ್ನು ತವಾದಿಂದ ಹೊರಗೆ ತೆಗೆದರೆ ಪಂಜಿನಂತ ಮೃದುವಾಗಿರುವ ಬಿಸಿಬಿಸಿ ರವೆ ಅಪ್ಪಂ ಸಿದ್ಧ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !