July 19, 2026
Sunday, July 19, 2026
spot_img

SNACKS |‌ ಟೀ ಟೈಮ್ ಸ್ಪೆಷಲ್: ಕೇವಲ 10 ನಿಮಿಷಗಳಲ್ಲಿ ಮಾಡಿ ಹೋಟೆಲ್ ಸ್ಟೈಲ್ ಗರಿಗರಿ ಪಾಲಕ್ ಪಕೋಡ!

ಮುಂಗಾರು ಮಳೆಯ ಚಳಿಗೆ ಸಂಜೆ ವೇಳೆಗೆ ಏನಾದರೂ ಬಿಸಿಬಿಸಿಯಾಗಿ ಹಾಗೂ ಗರಿಗರಿಯಾಗಿ ತಿನ್ನಬೇಕು ಎನಿಸುವುದು ಸಹಜ. ಅದರಲ್ಲೂ ಚಹಾ ಪ್ರಿಯರಿಗಂತೂ ಸಂಜೆ ಚಹಾದ ಜತೆಗೆ ನೆಂಚಿಕೊಳ್ಳಲು ಒಂದು ಪಕೋಡ ಇದ್ದರೆ ಆ ಮಜಾವೇ ಬೇರೆ. ನೀವೂ ಕೂಡ ಕೇವಲ 10 ನಿಮಿಷಗಳಲ್ಲಿ ಮನೆಯಲ್ಲೇ ಹೋಟೆಲ್ ಸ್ಟೈಲ್ ‘ಪಾಲಕ್ ಪಕೋಡ’ ಮಾಡಬಹುದು.  

ಬೇಕಾಗುವ ಸಾಮಗ್ರಿಗಳು

ಪಾಲಕ್ ಸೊಪ್ಪು

ಕಡಲೆ ಹಿಟ್ಟು

ಅಕ್ಕಿ ಹಿಟ್ಟು

ಈರುಳ್ಳಿ

ಹಸಿಮೆಣಸಿನಕಾಯಿ

ಅಚ್ಚಖಾರದ ಪುಡಿ

ಓಮಕಾಳು

ಉಪ್ಪು

ಎಣ್ಣೆ

ಮಾಡುವ ವಿಧಾನ

ಮೊದಲು ಒಂದು ದೊಡ್ಡ ಪಾತ್ರೆಯಲ್ಲಿ ಹೆಚ್ಚಿದ ಪಾಲಕ್ ಸೊಪ್ಪು, ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕೈಯಿಂದ ಚೆನ್ನಾಗಿ ಹಿಸುಕಿ 2 ನಿಮಿಷ ಬಿಡಬೇಕು. ಇದರಿಂದ ಸೊಪ್ಪಿನಲ್ಲಿರುವ ನೈಸರ್ಗಿಕ ನೀರು ಬಿಡುಗಡೆಯಾಗುತ್ತದೆ.

ನಂತರ ಅದೇ ಪಾತ್ರೆಗೆ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಅಚ್ಚಖಾರದ ಪುಡಿ, ಓಮಕಾಳು ಮತ್ತು 1 ಚಮಚ ಬಿಸಿ ಎಣ್ಣೆಯನ್ನು ಹಾಕಿ ನೀರು ಹಾಕದೆಯೇ ಒಣದಾಗಿ ಕಲಸಿಕೊಳ್ಳಬೇಕು.  ನಂತರ ಬಾಣಲೆಯಲ್ಲಿ ಎಣ್ಣೆಯನ್ನು ಚೆನ್ನಾಗಿ ಕಾಯಿಸಿ. ಕಲಸಿದ ಮಿಶ್ರಣವನ್ನು ಬಿಡಿಬಿಡಿಯಾಗಿ ಎಣ್ಣೆಗೆ ಉದುರಿಸಿ. ಪಕೋಡ ಎರಡೂ ಬದಿ ಗೋಲ್ಡನ್ ಬ್ರೌನ್ ಮತ್ತು ಗರಿಗರಿಯಾಗುವವರೆಗೆ ಚೆನ್ನಾಗಿ ಕರೆದು ತಟ್ಟೆಗೆ ತೆಗೆದರೆ ಬಿಸಿಬಿಸಿಯಾದ ಮತ್ತು ಕ್ರಿಸ್ಪಿಯಾದ ಪಾಲಕ್ ಪಕೋಡ ಸಿದ್ಧವಾಗುತ್ತದೆ.  

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !