ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅಭಿನಯದ ಬಹುನಿರೀಕ್ಷಿತ ‘ಈಥಾ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್‌ಗಳು ಬಿಡುಗಡೆಯಾಗಿದ್ದು, ಹೊಸ ಅವತಾರದಲ್ಲಿ ನಟಿ ಗಮನ ಸೆಳೆದಿದ್ದಾರೆ.
ಮಹಾರಾಷ್ಟ್ರದ ಪ್ರಸಿದ್ಧ ಲಾವಣಿ ಕಲಾವಿದೆ ವಿಠಾಬಾಯಿ ನಾರಾಯಣಗಾಂವ್ಕರ್ ಅವರ ಜೀವನಾಧಾರಿತ ಈ ಬಯೋಪಿಕ್ 2026ರ ಆಗಸ್ಟ್ 28ರಂದು ಬಿಡುಗಡೆಯಾಗಲಿದೆ.
ವಿಠಾಬಾಯಿ ಪಾತ್ರದಲ್ಲಿ ಶ್ರದ್ಧಾ
ಹೊಸ ಪೋಸ್ಟರ್‌ಗಳಲ್ಲಿ ಶ್ರದ್ಧಾ ಕಪೂರ್ ಸಾಂಪ್ರದಾಯಿಕ ನೌವಾರಿ ಸೀರೆ ಧರಿಸಿ, ಜಾನಪದ ಕಲಾವಿದೆಯ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಭಿನ್ನ ಲುಕ್ ಅಭಿಮಾನಿಗಳಿಂದ ಮೆಚ್ಚುಗೆ ಪಡೆದುಕೊಂಡಿದೆ.
ಮತ್ತೊಮ್ಮೆ ಒಂದಾದ ಯಶಸ್ವಿ ತಂಡ
ಚಿತ್ರವನ್ನು ಲಕ್ಷ್ಮಣ್ ಉಟೇಕರ್ ನಿರ್ದೇಶಿಸುತ್ತಿದ್ದು, ದಿನೇಶ್ ವಿಜನ್ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಅಜಯ್-ಅತುಲ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ರಣದೀಪ್ ಹೂಡಾ ಹಾಗೂ ಮೊಹಮ್ಮದ್ ಜೀಶನ್ ಅಯ್ಯೂಬ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ:
ಲೀಕ್ ಆದ ಟೀಸರ್ ಚರ್ಚೆಗೆ ಕಾರಣ
ಚಿತ್ರದ ಟೀಸರ್ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡ ಬಳಿಕ ಅದರ ಕೆಲವು ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಭಾವನಾತ್ಮಕ ಕಥಾಹಂದರದ ಸುಳಿವು ನೀಡಿದ ಆ ದೃಶ್ಯಗಳು ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿವೆ.
ರಕ್ಷಾಬಂಧನ ವಾರಾಂತ್ಯದಲ್ಲಿ ರಿಲೀಸ್
ಜಾನಪದ ಕಲೆಯ ಪರಂಪರೆಯನ್ನು ತೆರೆಗೆ ತರುವ ‘ಈಥಾ’ ಸಿನಿಮಾ 2026ರ ರಕ್ಷಾಬಂಧನ ವಾರಾಂತ್ಯದಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದು, ಈಗಾಗಲೇ ಸಿನಿಪ್ರಿಯರ ನಿರೀಕ್ಷೆ ಗರಿಗೆದರಿದೆ.



