ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ನಾಳೆ ಮಂಗಳೂರಿಗೆ ಆಗಮಿಸಲಿದ್ದಾರೆ. ಅಡ್ಯಾರ್ ಗಾರ್ಡನ್‌ನಲ್ಲಿ ರೋಹನ್ ಕಾರ್ಪೋರೇಷನ್ ಆಯೋಜಿಸಿರುವ ಆನ್ ಈವನಿಂಗ್ ವಿತ್ ಶಾರುಖ್ ಖಾನ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅಭಿಮಾನಿಗಳನ್ನು ಭೇಟಿ ಮಾಡಲಿದ್ದಾರೆ.
ಶಾರುಖ್ ಅವರ ಅಜ್ಜ 1960ರ ದಶಕದಲ್ಲಿ ಮಂಗಳೂರು ಬಂದರಿನಲ್ಲಿ ಮುಖ್ಯ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಆ ಸಮಯದಲ್ಲಿ ಶಾರುಖ್ ಅವರ ಬಾಲ್ಯದ ಐದು ವರ್ಷಗಳು ಅಜ್ಜಿ ಮನೆಯಲ್ಲಿ ಕಳೆದಿದ್ದರು. ಇದರ ಬಗ್ಗೆ ಶಾರುಖ್ ಮಾತನಾಡಿದ್ದು, ನಾನು ಮಂಗಳೂರಿನ ಮಗ. ನನ್ನ ಅಜ್ಜಿಯ ನೆನಪು ಈ ಊರಿನಲ್ಲಿದೆ, ನನ್ನ ಬಾಲ್ಯ ಇದ್ದದ್ದು ಇಲ್ಲಿಯೇ. ಮಂಗಳೂರು ನನ್ನಿಷ್ಟದ ಊರು ಎಂದು ಹೇಳಿಕೊಂಡಿದ್ದಾರೆ.
ಕಂಪನಿಯ ಆಹ್ವಾನದ ಮೇರೆಗೆ ಶಾರುಖ್ ಖಾನ್ ಆಗಮಿಸುತ್ತಿದ್ದು, ನಾಲ್ಕು ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ಇಲ್ಲಿ ಗಣ್ಯರು, ಉದ್ಯಮಿಗಳು ಹಾಗೂ ಆಹ್ವಾನಿತರಿಗೆ ಮಾತ್ರ ಅವಕಾಶವಿದೆ. ಆದರೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುವ ನಿರೀಕ್ಷೆ ಇದೆ.



