September 24, 2026
Thursday, September 24, 2026
spot_img

ಹೊಸ ನಾಯಕ, ಹೊಸ ಪಡೆ: ಮೊದಲ ಬಾರಿಗೆ ಐರ್ಲೆಂಡ್‌ಗೆ ಕಾಲಿಡುತ್ತಿರುವ ಟೀಮ್ ಇಂಡಿಯಾ ಪ್ಲೇಯರ್ಸ್ ಇವರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿ20 ವಿಶ್ವಕಪ್ ಬಳಿಕ ಭಾರತ ತಂಡ ಮತ್ತೆ ಚುಟುಕು ಕ್ರಿಕೆಟ್‌ಗೆ ಮರಳಲು ಸಜ್ಜಾಗಿದೆ. ಜೂನ್ 26ರಿಂದ ಬೆಲ್‌ಫಾಸ್ಟ್‌ನಲ್ಲಿ ಆರಂಭವಾಗಲಿರುವ ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟಿ20 ಸರಣಿಯಲ್ಲಿ ಯುವ ಆಟಗಾರರಿಗೆ ತಮ್ಮ ಸಾಮರ್ಥ್ಯ ತೋರಿಸಿಕೊಳ್ಳುವ ಅವಕಾಶ ಸಿಕ್ಕಿದೆ.

ವಿಶೇಷವೆಂದರೆ, ಈ ತಂಡದ ಆರು ಆಟಗಾರರು ಮೊದಲ ಬಾರಿಗೆ ಐರ್ಲೆಂಡ್ ನೆಲದಲ್ಲಿ ಪಂದ್ಯವಾಡಲಿದ್ದಾರೆ.

ಹೊಸ ನಾಯಕನಿಗೆ ಹೊಸ ಅನುಭವ

ಟೀಮ್ ಇಂಡಿಯಾದ ನೂತನ ನಾಯಕ ಶ್ರೇಯಸ್ ಅಯ್ಯರ್ ಅಂತಾರಾಷ್ಟ್ರೀಯ ಅನುಭವ ಹೊಂದಿದ್ದರೂ, ಐರ್ಲೆಂಡ್‌ನಲ್ಲಿ ಇದುವರೆಗೆ ಯಾವುದೇ ಪಂದ್ಯ ಆಡಿಲ್ಲ. ನಾಯಕನಾಗಿ ಅವರ ಮೊದಲ ವಿದೇಶಿ ಸವಾಲು ಇದಾಗಿದೆ.

ಆರು ಮಂದಿಗೆ ಚೊಚ್ಚಲ ಐರ್ಲೆಂಡ್ ಪ್ರವಾಸ

ಯುವ ಪ್ರತಿಭೆ ವೈಭವ್ ಸೂರ್ಯವಂಶಿ, ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ, ವೇಗಿ ಹರ್ಷಿತ್ ರಾಣಾ, ಅನ್‌ಕ್ಯಾಪ್ಡ್ ಬೌಲರ್ ಪ್ರಿನ್ಸ್ ಯಾದವ್ ಹಾಗೂ ಆಲ್‌ರೌಂಡರ್ ಸೂರ್ಯಾಂಶ್ ಶೆಡ್ಗೆ ಕೂಡ ಮೊದಲ ಬಾರಿಗೆ ಐರ್ಲೆಂಡ್‌ನಲ್ಲಿ ಆಡಲಿದ್ದಾರೆ.

ಇದನ್ನೂ ಓದಿ:

ಅನುಭವಿಗಳ ಮೇಲೂ ಜವಾಬ್ದಾರಿ

ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ತಿಲಕ್ ವರ್ಮಾ, ಶಿವಂ ದುಬೆ, ರವಿ ಬಿಷ್ಣೋಯ್, ವಾಷಿಂಗ್ಟನ್ ಸುಂದರ್ ಹಾಗೂ ಪ್ರಸಿದ್ಧ್ ಕೃಷ್ಣ ಈಗಾಗಲೇ ಐರ್ಲೆಂಡ್ ಪರಿಸ್ಥಿತಿಯಲ್ಲಿ ಆಡಿರುವ ಅನುಭವ ಹೊಂದಿದ್ದಾರೆ.

ಜೂನ್ 26ರಿಂದ ಆರಂಭ

ಬೆಲ್‌ಫಾಸ್ಟ್‌ನಲ್ಲಿ ಜೂನ್ 26ರಿಂದ ಆರಂಭವಾಗಲಿರುವ ಎರಡು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ತಂಡ ಹೊಸ ಮುಖಗಳು ಮತ್ತು ಹೊಸ ನಿರೀಕ್ಷೆಗಳೊಂದಿಗೆ ಕಣಕ್ಕಿಳಿಯಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !