ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-20ರ ಮಿನಿ ಹರಾಜಿಗೂ ಮುನ್ನವೇ ಮುಂಬೈ ಇಂಡಿಯನ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ನಡುವೆ ಬಿಗ್ ಟ್ರೇಡ್ ನಡೆಯುವ ಲಕ್ಷಣಗಳು ಕಾಣಿಸುತ್ತಿವೆ. ಮುಂಬೈ ನಾಯಕ ಹಾರ್ದಿಕ್ ಪಾಂಡ್ಯರನ್ನು ಖರೀದಿಸಲು ಕೆಕೆಆರ್ ಆಡಳಿತ ಮಂಡಳಿ ಈಗಾಗಲೇ ಮಾತುಕತೆ ಆರಂಭಿಸಿದೆ ಎಂದು ಪಿಟಿಐ ವರದಿ ಮಾಡಿದೆ.
ನಾಯಕತ್ವದ ಬಂಪರ್ ಆಫರ್
ಕೆಕೆಆರ್ ಕೇವಲ ಕೋಟಿ ಕೋಟಿ ಹಣದ ಆಫರ್ ಮಾತ್ರ ನೀಡಿಲ್ಲ, ಬದಲಿಗೆ ತಂಡದ ದೀರ್ಘಕಾಲದ ನಾಯಕತ್ವದ ಜವಾಬ್ದಾರಿಯನ್ನು ಹೊರುವಂತೆ ಪಾಂಡ್ಯಗೆ ಆಮಿಷ ಒಡ್ಡಿದೆ. ಐಪಿಎಲ್ 2027ರ ಹರಾಜಿಗೂ ಮುನ್ನವೇ ಅವರನ್ನು ತಂಡಕ್ಕೆ ಸೇರಿಸಿಕೊಂಡು ಕ್ಯಾಪ್ಟನ್ ಮಾಡಲು ಫ್ರಾಂಚೈಸಿ ಪ್ಲ್ಯಾನ್ ರೂಪಿಸಿದೆ.
ಮುಂಬೈ ಮುಂದಿರುವ 2 ಆಯ್ಕೆಗಳು
ಹಾರ್ದಿಕ್‌ಗಾಗಿ ಕೆಕೆಆರ್ ಮುಂಬೈ ಇಂಡಿಯನ್ಸ್ ಮುಂದೆ ಎರಡು ಪ್ರಮುಖ ಆಯ್ಕೆಗಳನ್ನು ಇಟ್ಟಿದೆ:
- ನಗದು ಒಪ್ಪಂದ: ಮುಂಬೈ ಕೇಳುವ ಯಾವುದೇ ದೊಡ್ಡ ಮೊತ್ತವನ್ನು ನೀಡಿ ಹಾರ್ದಿಕ್ ಅವರನ್ನು ನೇರವಾಗಿ ಖರೀದಿಸುವುದು.
- ಸ್ವ್ಯಾಪ್ ಡೀಲ್: ಕೋಲ್ಕತ್ತಾ ತಂಡದಲ್ಲಿರುವ ಆಲ್ ರೌಂಡರ್ ಕ್ಯಾಮರೋನ್ ಗ್ರೀನ್ ಅವರನ್ನು ಮುಂಬೈಗೆ ನೀಡಿ, ಪ್ರತಿಯಾಗಿ ಹಾರ್ದಿಕ್ ಪಾಂಡ್ಯರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದು.
ಒಟ್ಟಿನಲ್ಲಿ ಈ ಮೆಗಾ ಟ್ರೇಡ್ ಸಕ್ಸಸ್ ಆದ್ರೆ ಐಪಿಎಲ್ ಇತಿಹಾಸದಲ್ಲೇ ಇದು ಅತ್ಯಂತ ದೊಡ್ಡ ಆಟಗಾರರ ಅದಲು-ಬದಲು ಪ್ರಕ್ರಿಯೆಯಾಗಲಿದೆ.



