August 19, 2026
Wednesday, August 19, 2026
spot_img

ಮತ್ತೆ ಶುರುವಾಯ್ತಾ ಯುದ್ಧ? ಇರಾನ್‌ನ 10 ಪ್ರಮುಖ ತಾಣಗಳ ಮೇಲೆ ಅಮೆರಿಕ ಪಡೆಗಳಿಂದ ಬಾಂಬ್ ಮಳೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿದ ಇರಾನ್ ವಿರುದ್ಧ ಅಮೆರಿಕ ಮಿಲಿಟರಿ ಪಡೆಗಳು ಸತತ ಎರಡನೇ ರಾತ್ರಿಯೂ ಭೀಕರ ವೈಮಾನಿಕ ದಾಳಿ ನಡೆಸಿವೆ. ಹಾರ್ಮುಜ್ ಜಲಸಂಧಿಯಲ್ಲಿ ಅಂತರರಾಷ್ಟ್ರೀಯ ತೈಲ ಟ್ಯಾಂಕರ್ ಮೇಲೆ ಇರಾನ್ ದಾಳಿ ನಡೆಸಿದ್ದೇ ಈ ಪ್ರತಿಯಾಕ್ರಮಣಕ್ಕೆ ಪ್ರಮುಖ ಕಾರಣವಾಗಿದೆ. ಒಪ್ಪಂದಗಳಿಂದ ಇರಾನ್ ಎಂದಿಗೂ ಪಾಠ ಕಲಿಯುವುದಿಲ್ಲ ಎಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಕಿಕು’ ತೈಲ ಟ್ಯಾಂಕರ್ ಮೇಲೆ ಇರಾನ್ ಕಣ್ಣು

ಹಾರ್ಮುಜ್ ಜಲಸಂಧಿಯ ಮಾರ್ಗವಾಗಿ ಸುಮಾರು 20 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಸಾಗಿಸುತ್ತಿದ್ದ ಪನಾಮ ದೇಶದ ಧ್ವಜ ಹೊಂದಿದ ‘ಕಿಕು’ ಟ್ಯಾಂಕರ್‌ಗೆ ಇರಾನ್ ಹಡಗು ಡಿಕ್ಕಿ ಹೊಡೆದು ಹಾನಿ ಮಾಡಿದೆ ಎಂದು ಅಮೆರಿಕ ಆರೋಪಿಸಿದೆ. ಅದೃಷ್ಟವಶಾತ್ ಟ್ಯಾಂಕರ್‌ನಲ್ಲಿದ್ದ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

ಇರಾನ್‌ನ 10 ರಕ್ಷಣಾ ನೆಲೆಗಳು ಧ್ವಂಸ

ಇರಾನ್‌ನ ಪ್ರಮುಖ 10 ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ಯುಎಸ್ ಪಡೆಗಳು ದಾಳಿ ನಡೆಸಿವೆ. ಇದರಲ್ಲಿ ಕಣ್ಗಾವಲು ಮೂಲಸೌಕರ್ಯ, ವಾಯು ರಕ್ಷಣಾ ತಾಣಗಳು, ಡ್ರೋನ್ ಸಂಗ್ರಹಣಾ ಕೇಂದ್ರಗಳು, ಸಂವಹನ ವ್ಯವಸ್ಥೆಗಳು ಮತ್ತು ಮೈನ್‌ಲೇಯರ್ ಸಾಮರ್ಥ್ಯದ ತಾಣಗಳು ಸಂಪೂರ್ಣ ನಾಶವಾಗಿವೆ ಎಂದು ಅಮೆರಿಕ ಮಿಲಿಟರಿ ಅಧಿಕೃತವಾಗಿ ಪ್ರಕಟಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !