July 1, 2026
Wednesday, July 1, 2026
spot_img

ಮುಂಬೈ ಬಿಟ್ಟು ಪರ್ಮನೆಂಟ್‌ ಆಗಿ ಬೆಂಗಳೂರಿಗೆ ಶಿಫ್‌ ಆದ್ರಾ ಹಾರ್ದಿಕ್‌ ಪಾಂಡ್ಯ? ಕಾರಣ ಏನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಟೀಂ ಇಂಡಿಯಾ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಪರ್ಮನೆಂಟ್‌ ಆಗಿ ಮುಂಬೈ ಬಿಟ್ಟು ಬೆಂಗಳೂರಿಗೆ ಶಿಫ್ಟ್‌ ಆಗಿದ್ದಾರೆ.

ಹೌದು, ಸದ್ಯ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಪಾಂಡ್ಯ ಬೆಂಗಳೂರಿನ ಹೊರವಲಯದಲ್ಲಿರುವ ಸೆಂಟರ್ ಆಫ್ ಎಕ್ಸಲೆನ್ಸ್ ತರಬೇತಿ ಕೇಂದ್ರದ ಹತ್ತಿರವೇ ಮನೆಯೊಂದನ್ನು ಬಾಡಿಗೆಗೆ ಪಡೆದು ಈಗಾಗಲೇ ವಾಸ್ತವ್ಯ ಹೂಡಿದ್ದಾರೆ.

ಹತ್ತು ವರ್ಷಗಳಿಂದ ಹಾರ್ದಿಕ್‌ ಮುಂಬೈನ ಲೋವರ್‌ ಪರೇಲ್‌ನಲ್ಲಿ ವಾಸವಿದ್ದರು. ನಿತ್ಯವೂ ಘಾನ್ಸೋಲಿಯಲ್ಲಿರುವ ಮುಂಬೈ ಇಂಡಿಯನ್ಸ್‌ ಫಿಸಿಲಿಟಿ ಸೆಂಟರ್‌ಗೆ ಹೋಗಬೇಕಿತ್ತು. ಆದರೆ ಮುಂಬೈ ಟ್ರಾಫಿಕ್‌ನಲ್ಲಿ ಪ್ರಯಾಣಿಸಿ ಟೈಮ್‌ ವೇಸ್ಟ್‌ ಆಗುತ್ತಿತ್ತು. ಜತೆಗೆ ಕಾರಿನಲ್ಲಿ ಓಡಾಡಿಯೇ ಸುಸ್ತಾಗುತ್ತಿತ್ತು ಎನ್ನುವ ಕಾರನಕ್ಕೆ ಬೆಂಗಳೂರಿಗೆ ಶಿಫ್ಟ್‌ ಆಗಿದ್ದಾರೆ.

ಬೆಂಗಳೂರು ಹೊರವಲಯದಲ್ಲಿರುವ ಸೆಂಟರ್‌ ಆಫ್‌ ಎಕ್ಸಲೆನ್ಸ್‌ ಕೇಂದ್ರದ ಸಮೀಪದಲ್ಲಿಯೇ ಮನೆಯನ್ನು ಬಾಡಿಗೆ ಪಡೆದಿದ್ದಾರೆ. ಸಾಮಾನ್ಯವಾಗಿ ಬಿಸಿಸಿಐನ ಕೇಂದ್ರ ಒಪ್ಪಂದದಲ್ಲಿರುವ ಆಟಗಾರರು ಕೇವಲ ಗಾಯಗೊಂಡಾಗ ಚಿಕಿತ್ಸೆಗಾಗಿ ಅಥವಾ ರಾಷ್ಟ್ರೀಯ ಶಿಬಿರಗಳು ಇದ್ದಾಗ ಮಾತ್ರ ಬೆಂಗಳೂರಿನ ತರಬೇತಿ ಕೇಂದ್ರಕ್ಕೆ ಬರುತ್ತಾರೆ. ಆದರೆ ಇಲ್ಲೇ ಉಳಿದು ತರಬೇತಿ ಪಡೆಯಲು ನಿರ್ಧರಿಸಿದ ಟೀಮ್ ಇಂಡಿಯಾದ ಮೊದಲ ಆಟಗಾರ ಹಾರ್ದಿಕ್ ಪಾಂಡ್ಯ.

32 ವರ್ಷದ ಹಾರ್ದಿಕ್ ಪಾಂಡ್ಯ ಮುಂದಿನ ಏಕದಿನ ವಿಶ್ವಕಪ್​ ಅನ್ನು ಗಮನದಲ್ಲಿಟ್ಟುಕೊಂಡು ಫಿಟ್​ನೆಸ್​ನತ್ತ ಸಂಪೂರ್ಣ ಗಮನ ಕೇಂದ್ರೀಕರಿಸಲು ನಿರ್ಧರಿಸಿದ್ದಾರೆ. ಅಲ್ಲದೆ ಮುಂದಿನ 5 ರಿಂದ 6 ವರ್ಷಗಳ ಕಾಲ ಯಾವುದೇ ದೊಡ್ಡ ಗಾಯಗಳಿಲ್ಲದೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಕ್ರಿಯವಾಗಿ ಆಡುವುದು ಅವರ ಗುರಿಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !