August 24, 2026
Monday, August 24, 2026
spot_img

ಸವಾರರ ಜೇಬಿಗೆ ಕತ್ತರಿ: ಬಸ್ ದರ ಪ್ರಸ್ತಾವನೆ ಬೆನ್ನಲ್ಲೇ ಬೆಂಗಳೂರಿನ ಪ್ರಮುಖ ಟೋಲ್ ದರಗಳು ದುಬಾರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಜನತೆಗೆ ಸಾರಿಗೆ ಬಸ್ ದರ ಏರಿಕೆಯ ಪ್ರಸ್ತಾವನೆಯ ಬೆನ್ನಲ್ಲೇ ಮತ್ತೊಂದು ಆಘಾತ ಎದುರಾಗಿದೆ. ನಗರದ ಪ್ರಮುಖ ರಸ್ತೆಗಳಾದ ನೈಸ್ ರಸ್ತೆ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇ ಟೋಲ್ ದರಗಳನ್ನು ಇಂದಿನಿಂದಲೇ (ಜುಲೈ 1, 2026) ಭಾರಿ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ.

ನೈಸ್ ರಸ್ತೆ (NICE Road) ಹೊಸ ದರ ಪಟ್ಟಿ (ಕಾರುಗಳಿಗೆ):

ನಂದಿ ಎಕನಾಮಿಕ್ ಕಾರಿಡಾರ್ ಎಂಟರ್‌ಪ್ರೈಸಸ್ ಲಿಮಿಟೆಡ್ ಹೊಸೂರು ರಸ್ತೆಯಿಂದ ತುಮಕೂರು ರಸ್ತೆಯವರೆಗಿನ ಸೆಕ್ಷನ್ ವಾರು ದರಗಳನ್ನು ಪರಿಷ್ಕರಿಸಿದೆ:

  • ಹೊಸೂರು ರಸ್ತೆ – ಬನ್ನೇರುಘಟ್ಟ ರಸ್ತೆ: 72 ರೂ.
  • ಬನ್ನೇರುಘಟ್ಟ ರಸ್ತೆ – ಕನಕಪುರ ರಸ್ತೆ: 53 ರೂ.
  • ಕನಕಪುರ ರಸ್ತೆ – ಕ್ಲೋವರ್‌ಲೀಫ್ ಜಂಕ್ಷನ್: 39 ರೂ.
  • ಕ್ಲೋವರ್‌ಲೀಫ್ ಜಂಕ್ಷನ್ – ಮೈಸೂರು ರಸ್ತೆ: 36 ರೂ.
  • ಮೈಸೂರು ರಸ್ತೆ – ಮಾಗಡಿ ರಸ್ತೆ: 77 ರೂ.
  • ಮಾಗಡಿ ರಸ್ತೆ – ತುಮಕೂರು ರಸ್ತೆ: 61 ರೂ.
  • ಲಿಂಕ್ ರಸ್ತೆ: 83 ರೂ.

ಎಲೆಕ್ಟ್ರಾನಿಕ್ಸ್ ಸಿಟಿ ಎಕ್ಸ್‌ಪ್ರೆಸ್‌ವೇ ದರ:

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಮಾರ್ಗಸೂಚಿ ಅನ್ವಯ ಬೆಂಗಳೂರು ಎಲಿವೇಟೆಡ್ ಟೋಲ್ವೇ ಪ್ರೈವೇಟ್ ಲಿಮಿಟೆಡ್ ದರ ಹೆಚ್ಚಳ ಮಾಡಿದೆ. ಜೂನ್ 30, 2027 ರವರೆಗೆ ಈ ದರಗಳು ಜಾರಿಯಲ್ಲಿರಲಿವೆ.

  • ಸಿಂಗಲ್ ಜರ್ನಿ: 65 ರೂ. (ಹಿಂದೆ 60 ರೂ. ಇತ್ತು)
  • ಮಲ್ಟಿಪಲ್ ಜರ್ನಿ: 100 ರೂ.

ದಿನನಿತ್ಯ ಸಂಚರಿಸುವ ಐಟಿ ಉದ್ಯೋಗಿಗಳು ಹಾಗೂ ವಾಹನ ಸವಾರರಿಗೆ ಈ ಪರಿಷ್ಕೃತ ದರಗಳು ದೊಡ್ಡ ಆರ್ಥಿಕ ಹೊರೆಯಾಗಲಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !