July 2, 2026
Thursday, July 2, 2026
spot_img

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಬರುವ ಮುನ್ನವೇ ಸೂಪರ್‌ಸ್ಟಾರ್ ಪಟ್ಟ: ಫ್ಯಾನ್ಸ್ ಮನಗೆದ್ದ ಯುವ ಸೆನ್ಸೇಷನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವ ಕ್ರಿಕೆಟ್‌ಗೆ ಮತ್ತೊಬ್ಬ ಯುವ ಸೂಪರ್‌ಸ್ಟಾರ್ ಎಂಟ್ರಿಯಾಗುವ ಮುನ್ಸೂಚನೆ ಸಿಕ್ಕಿದೆ. ಆ ಆಟಗಾರನೇ ಬಿಹಾರದ 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ. ಇನ್ನೂ ಭಾರತದ ಹಿರಿಯರ ತಂಡಕ್ಕೆ ಅಧಿಕೃತವಾಗಿ ಪದಾರ್ಪಣೆ ಮಾಡದಿದ್ದರೂ, ಇವರ ಜನಪ್ರಿಯತೆ ಮಾತ್ರ ಸದ್ಯ ಗಗನಕ್ಕೇರಿದೆ.

ಇಂಗ್ಲೆಂಡ್‌ನಲ್ಲಿ ಸೂರ್ಯವಂಶಿ ಹವಾ!

ಪ್ರಸ್ತುತ ಇಂಗ್ಲೆಂಡ್ ಪ್ರವಾಸದಲ್ಲಿರುವ ವೈಭವ್ ಅವರನ್ನು ನೋಡಲು ಸ್ಥಳೀಯ ಅಭಿಮಾನಿಗಳು ಮುಗಿಬೀಳುತ್ತಿದ್ದಾರೆ. ಟೀಮ್ ಹೋಟೆಲ್‌ನಲ್ಲಿ ಇವರ ಒಂದು ಝಲಕ್ ಪಡೆಯಲು ಹಾಗೂ ನೆಟ್ಸ್‌ನಲ್ಲಿ ಇವರ ಭರ್ಜರಿ ಬ್ಯಾಟಿಂಗ್ ವೀಕ್ಷಿಸಲು ಕ್ರಿಕೆಟ್ ಪ್ರೇಮಿಗಳು ಬರೋಬ್ಬರಿ 5 ರಿಂದ 6 ಗಂಟೆಗಳ ಕಾಲ ಡ್ರೈವ್ ಮಾಡಿಕೊಂಡು ಕ್ರೀಡಾಂಗಣಕ್ಕೆ ಬರುತ್ತಿರುವುದು ಇವರ ಕ್ರೇಜ್‌ಗೆ ಸಾಕ್ಷಿಯಾಗಿದೆ. ಯಾವುದೇ ಹಿರಿಯ ಸ್ಟಾರ್ ಆಟಗಾರನಿಗಿಂತ ಕಮ್ಮಿಯಿಲ್ಲದ ‘ಆರಾ’ (Aura) ಇವರ ಸುತ್ತ ಸೃಷ್ಟಿಯಾಗಿದೆ.

ಮ್ಯಾನೇಜ್‌ಮೆಂಟ್‌ನ ಜಾಗರೂಕ ನಡೆ

ಅಭಿಮಾನಿಗಳು ಮತ್ತು ಪ್ರಾಯೋಜಕರು ವೈಭವ್ ಮೈದಾನಕ್ಕಿಳಿದು ಅಬ್ಬರಿಸುವುದನ್ನು ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಆದರೆ, ಭಾರತೀಯ ಕ್ರಿಕೆಟ್ ಮ್ಯಾನೇಜ್‌ಮೆಂಟ್ ಈ ಯುವ ಆಟಗಾರನ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಜಾಗರೂಕತೆಯಿಂದ ಹೆಜ್ಜೆ ಇಡುತ್ತಿದೆ. ಯಾವುದೇ ಒತ್ತಡ ಹೇರದೆ ಇವರನ್ನು ಕಾಯ್ದುಕೊಳ್ಳುವ ಸಲುವಾಗಿ, ಮೊದಲ ಟಿ20 ಪಂದ್ಯದ ಪ್ಲೇಯಿಂಗ್ ಇಲೆವೆನ್‌ನಿಂದ ಇವರಿಗೆ ವಿಶ್ರಾಂತಿ ನೀಡಲಾಗಿತ್ತು. ಮುಂಬರುವ ದಿನಗಳಲ್ಲಿ ಈ ಯುವ ಆಟಗಾರ ಜಾಗತಿಕ ಕ್ರಿಕೆಟ್ ಆಳುವುದರಲ್ಲಿ ಯಾವುದೇ ಸಂಶಯವಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !