July 2, 2026
Thursday, July 2, 2026
spot_img

ಬಾಲಿವುಡ್‌ನಲ್ಲಿ ಒಂದು ಯುಗ ಅಂತ್ಯ: ನಿರ್ದೇಶನಕ್ಕೆ ಗುಡ್‌ಬೈ ಹೇಳಿದ ಆಲಿಯಾ ಭಟ್ ತಂದೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ಖ್ಯಾತ ನಿರ್ದೇಶಕ ಮಹೇಶ್ ಭಟ್ ತಮ್ಮ ನಿರ್ದೇಶನದ ಪಯಣಕ್ಕೆ ಅಧಿಕೃತವಾಗಿ ಅಂತ್ಯ ಘೋಷಿಸಿದ್ದಾರೆ. ಹಲವು ದಶಕಗಳ ಕಾಲ ವಿಭಿನ್ನ ಕಥೆಗಳ ಮೂಲಕ ಸಿನಿಪ್ರಿಯರನ್ನು ರಂಜಿಸಿದ್ದ ಅವರು, ಇನ್ನು ಮುಂದೆ ನಿರ್ದೇಶಕರಾಗಿ ಯಾವುದೇ ಸಿನಿಮಾ ಮಾಡುವ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಹೊಸ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡುವುದರಲ್ಲೇ ತಮ್ಮ ಮುಂದಿನ ಪಯಣವನ್ನು ಮುಂದುವರಿಸಲು ನಿರ್ಧರಿಸಿದ್ದಾರೆ.

ಬದಲಾಗಿರುವ ಚಿತ್ರರಂಗದ ಬಗ್ಗೆ ಅಸಮಾಧಾನ

ಇಂದಿನ ಸಿನಿಮಾ ನಿರ್ಮಾಣದ ಶೈಲಿ ಸಂಪೂರ್ಣ ಬದಲಾಗಿದೆ ಎಂದು ಮಹೇಶ್ ಭಟ್ ಅಭಿಪ್ರಾಯಪಟ್ಟಿದ್ದಾರೆ. ಮಾರುಕಟ್ಟೆಯ ಲೆಕ್ಕಾಚಾರಗಳಿಗೆ ಅನುಗುಣವಾಗಿ ಕಥೆ ಮತ್ತು ಸಿನಿಮಾ ರೂಪುಗೊಳ್ಳುತ್ತಿರುವುದರಿಂದ, ನಿರ್ದೇಶಕರ ಸೃಜನಶೀಲತೆಗೆ ಹಿಂದಿನಷ್ಟು ಅವಕಾಶ ಸಿಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:

‘ಸಡಕ್ 2’ ಬಳಿಕ ಮತ್ತೆ ಸಿನಿಮಾ ಇಲ್ಲ

1999ರ ಬಳಿಕ ದೀರ್ಘ ವಿರಾಮ ತೆಗೆದುಕೊಂಡಿದ್ದ ಮಹೇಶ್ ಭಟ್, 2020ರಲ್ಲಿ ‘ಸಡಕ್ 2’ ಚಿತ್ರದ ಮೂಲಕ ಮತ್ತೆ ನಿರ್ದೇಶಕರಾಗಿ ಮರಳಿದ್ದರು. ಆದರೆ ಅದೇ ತಮ್ಮ ಕೊನೆಯ ನಿರ್ದೇಶನದ ಸಿನಿಮಾ ಆಗಿದ್ದು, ಇನ್ನು ಮುಂದೆ ಕ್ಯಾಮೆರಾ ಹಿಂದೆ ನಿಲ್ಲುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಯುವ ಪ್ರತಿಭೆಗಳ ಬೆಳವಣಿಗೆಯತ್ತ ಗಮನ

ಸುಮಾರು ಐದು ದಶಕಗಳ ಸಿನಿ ಪಯಣದಲ್ಲಿ 50ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿರುವ ಮಹೇಶ್ ಭಟ್, ಈಗ ತಮ್ಮ ಅನುಭವವನ್ನು ಯುವ ನಿರ್ದೇಶಕರು ಮತ್ತು ಹೊಸ ಪ್ರತಿಭೆಗಳೊಂದಿಗೆ ಹಂಚಿಕೊಳ್ಳಲು ಬಯಸಿದ್ದಾರೆ. ತಮ್ಮ ಯಶಸ್ಸಿಗಿಂತ ಹೊಸ ತಲೆಮಾರಿನ ಯಶಸ್ಸಿಗೆ ನೆರವಾಗುವುದೇ ಇಂದಿನ ತಮ್ಮ ದೊಡ್ಡ ಗುರಿ ಎಂದು ಅವರು ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !