July 2, 2026
Thursday, July 2, 2026
spot_img

MONSOON TIPS| ಬಟ್ಟೆಗಳಿಂದ ಬರುವ ಕಟು ವಾಸನೆಗೆ ಇಂದೇ ಬ್ರೇಕ್; ಇಲ್ಲಿದೆ ಸೂಪರ್ ಮನೆಮದ್ದು!

ಮಳೆಗಾಲ ಬಂತೆಂದರೆ ಸಾಕು ಬಟ್ಟೆಗಳು ಬೇಗನೆ ಒಣಗುವುದಿಲ್ಲ. ಅದರಲ್ಲೂ ಬಟ್ಟೆಗಳು ಸರಿಯಾಗಿ ಒಣಗದೆ ಹೋದರೆ ಅವುಗಳಿಂದ ಒಂಥರಾ ಕಟು ವಾಸನೆ ಅಥವಾ ಬೂಸ್ಟು ವಾಸನೆ ಬರಲು ಆರಂಭವಾಗುತ್ತದೆ. ಬಟ್ಟೆಯನ್ನು ಎಷ್ಟೇ ಚೆನ್ನಾಗಿ ಒಗೆದಿದ್ದರೂ ಈ ವಾಸನೆ ಮಾತ್ರ ಹೋಗುವುದಿಲ್ಲ. ಬಟ್ಟೆಗಳಲ್ಲಿ ತೇವಾಂಶ ಇರುವುದರಿಂದ ಬ್ಯಾಕ್ಟೀರಿಯಾಗಳು ಸುಲಭವಾಗಿ ವೃದ್ಧಿಯಾಗುವುದೇ ಈ ವಾಸನೆಗೆ ಮುಖ್ಯ ಕಾರಣ.

ಬಟ್ಟೆಗಳು ಮಳೆಗಾಲದಲ್ಲೂ ಸದಾ ತಾಜಾವಾಗಿ ಮತ್ತು ಸುವಾಸನೆಯಿಂದ ಕೂಡಿರಲು ಮನೆಯಲ್ಲೇ ಮಾಡಬಹುದಾದ ಅತ್ಯಂತ ಸರಳ ಮಾರ್ಗಗಳು ಇಲ್ಲಿವೆ.

ವಿನೆಗರ್ ಅಥವಾ ಲಿಂಬೆ ರಸ

ಬಟ್ಟೆ ಒಗೆಯುವಾಗ ಡಿಟರ್ಜೆಂಟ್‌ ಜತೆಗೆ ಒಂದು ಕಪ್ ಬಿಳಿ ವಿನೆಗರ್ ಅಥವಾ 2 ಚಮಚ ಲಿಂಬೆ ರಸವನ್ನು ನೀರಿಗೆ ಸೇರಿಸಬೇಕು. ಇದು ಬಟ್ಟೆಯಲ್ಲಿರುವ ಬ್ಯಾಕ್ಟೀರಿಯಾಗಳನ್ನು ಸಂಪೂರ್ಣವಾಗಿ ನಾಶಪಡಿಸಿ, ಕೆಟ್ಟ ವಾಸನೆಯನ್ನು ತಕ್ಷಣವೇ ದೂರ ಮಾಡುತ್ತದೆ.

ಅಡುಗೆ ಸೋಡಾ

ಬಟ್ಟೆಗಳನ್ನು ನೆನೆಸುವ ನೀರಿಗೆ ಒಂದೆರಡು ಚಮಚ ಅಡುಗೆ ಸೋಡಾ ಹಾಕಿ ಕಲಸಿದರೆ. ಬಟ್ಟೆಯಲ್ಲಿರುವ ಜಿಡ್ಡು ಮತ್ತು ತೇವಾಂಶದಿಂದ ಉಂಟಾದ ವಾಸನೆಯನ್ನು ಸಂಪೂರ್ಣವಾಗಿ ಹೀರಿಕೊಳ್ಳುತ್ತದೆ.

ಡೀಟಾಲ್ ಅಥವಾ ಆಂಟಿಸೆಪ್ಟಿಕ್ ದ್ರಾವಣ

ಬಟ್ಟೆ ಒಗೆದು ಮುಗಿದ ನಂತರ, ಕೊನೆಯದಾಗಿ ನೀರಿಗೆ ಕೆಲವು ಹನಿ ಡೆಟಾಲ್ ಹಾಕಿ 5 ನಿಮಿಷ ನೆನೆಸಿ ನಂತರ ಒಣಗಿಸಬೇಕು. ಇದು ಬಟ್ಟೆಯಲ್ಲಿ ಯಾವುದೇ ಕ್ರಿಮಿ-ಕೀಟಗಳು ಅಥವಾ ಫಂಗಸ್ ಬೆಳೆಯದಂತೆ ತಡೆಯುತ್ತದೆ.

ಇದನ್ನೂ ಓದಿ:

ಬಟ್ಟೆ ಒಣಗಿಸುವಾಗ ಮತ್ತು ಇಡುವಾಗ ಪಾಲಿಸಬೇಕಾದ ಟಿಪ್ಸ್:

ಬಟ್ಟೆಗಳು ಶೇ. 90 ರಷ್ಟು ಒಣಗಿದ್ದರೂ ಸಹ ಅವುಗಳನ್ನು ಧರಿಸುವ ಮುನ್ನ ಅಥವಾ ಕಪಾಟಿನಲ್ಲಿ ಇಡುವ ಮುನ್ನ ಚೆನ್ನಾಗಿ ಐರನ್ ಮಾಡಬೇಕು.

ಬಟ್ಟೆಗಳನ್ನು ಮನೆಯೊಳಗೆ ಒಣಗಿಸಬೇಕಾಗಿ ಬಂದರೆ, ಫ್ಯಾನ್ ಗಾಳಿ ಇರುವ ಅಥವಾ ಕಿಟಕಿ ಹತ್ತಿರ ಚೆನ್ನಾಗಿ ಗಾಳಿ ಆಡುವ ಕೋಣೆಯನ್ನು ಹಾಕುವುದು ಉತ್ತಮ. ‌

ಬಟ್ಟೆಗಳನ್ನು ಇಡುವ ವಾರ್ಡ್‌ರೋಬ್ ಅಥವಾ ಕಪಾಟಿನ ಮೂಲೆಗಳಲ್ಲಿ ಪಚ್ಚೆ ಕರ್ಪೂರ, ಶ್ರೀಗಂಧದ ಪೌಚ್ ಅಥವಾ ನ್ಯಾಫ್ತಲಿನ್ ಗುಳಿಗೆಗಳನ್ನು ಇಡಬೇಕು.

ಬೆವರಿನಿಂದ ಒದ್ದೆಯಾದ ಅಥವಾ ಮಳೆಯಲ್ಲಿ ನೆನೆದ ಬಟ್ಟೆಗಳನ್ನು ತಕ್ಷಣವೇ ಒಗೆಯಲು ಹಾಕದಿದ್ದರೆ, ಅವುಗಳನ್ನು ಇತರೆ ಬಟ್ಟೆಗಳ ಜೊತೆ ಸೇರಿಸಬಾರದು.  

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !