October 15, 2026
Thursday, October 15, 2026
spot_img

Monsoon Special | ಗರಿಗರಿಯಾದ ಪ್ರಾನ್ಸ್ ಪಕೋಡ: 20 ನಿಮಿಷದಲ್ಲಿ ಸೂಪರ್ ಟೇಸ್ಟಿ ಸ್ನ್ಯಾಕ್ಸ್ ರೆಡಿ

ಮಳೆಗಾಲದಲ್ಲಿ ಬಿಸಿ ಬಿಸಿ ತಿಂಡಿಗೆ ಪ್ರಾನ್ಸ್ ಪಕೋಡ ಬೆಸ್ಟ್. ಹೊರಗೆ ಗರಿಗರಿಯಾಗಿದ್ದು, ಒಳಗೆ ಮೃದುವಾದ ಪ್ರಾನ್ಸ್ ರುಚಿ ನೀಡುವ ಈ ರೆಸಿಪಿ ಕೇವಲ 20 ನಿಮಿಷಗಳಲ್ಲಿ ಸಿದ್ಧವಾಗುತ್ತದೆ. ಸಂಜೆ ಚಹಾದ ಜೊತೆ ಸವಿಯಲು ಇದು ಪರ್ಫೆಕ್ಟ್ ಸ್ನ್ಯಾಕ್ಸ್.

ಬೇಕಾಗುವ ಸಾಮಗ್ರಿಗಳು

ಪ್ರಾನ್ಸ್ – 250 ಗ್ರಾಂ
ಕಡಲೆ ಹಿಟ್ಟು – 4-5 ಚಮಚ
ಅಕ್ಕಿ ಹಿಟ್ಟು ಅಥವಾ ಕಾರ್ನ್‌ಫ್ಲೋರ್ – 2 ಚಮಚ
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಈರುಳ್ಳಿ – 1
ಹಸಿರು ಮೆಣಸಿನಕಾಯಿ – 2
ಖಾರದ ಪುಡಿ – 1 ರಿಂದ 2 ಚಮಚ
ಅರಿಶಿನ – ಚಿಟಿಕೆ
ಗರಂ ಮಸಾಲಾ – ½ ಚಮಚ
ನಿಂಬೆ ರಸ – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – ಸ್ವಲ್ಪ
ಎಣ್ಣೆ – ಕರಿಯಲು

ಮಾಡುವ ವಿಧಾನ

ಒಂದು ಪಾತ್ರೆಯಲ್ಲಿ ಪ್ರಾನ್ಸ್ ಗೆ ಉಪ್ಪು, ನಿಂಬೆ ರಸ, ಅರಿಶಿನ, ಖಾರದ ಪುಡಿ ಮತ್ತು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. 15–20 ನಿಮಿಷ ನೆನೆಸಿಡಿ.

ಮ್ಯಾರಿನೇಟ್ ಮಾಡಿದ ಪ್ರಾನ್ಸ್ ಗೆ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ಗರಂ ಮಸಾಲಾ ಸೇರಿಸಿ. ಅಗತ್ಯವಿದ್ದರೆ ಸ್ವಲ್ಪ ನೀರು ಸಿಂಪಡಿಸಿ ಹಿಟ್ಟು ಚೆನ್ನಾಗಿ ಅಂಟಿಕೊಳ್ಳುವಂತೆ ಕಲಸಿ.

ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಪ್ರಾನ್ಸ್ ಮಿಶ್ರಣವನ್ನು ಸಣ್ಣ ಸಣ್ಣ ಭಾಗಗಳಾಗಿ ಎಣ್ಣೆಗೆ ಹಾಕಿ ಮಧ್ಯಮ ಉರಿಯಲ್ಲಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಕರಿಯಿರಿ.

ಕರಿದ ಪಕೋಡವನ್ನು ಟಿಶ್ಯೂ ಮೇಲೆ ತೆಗೆದು ಹೆಚ್ಚುವರಿ ಎಣ್ಣೆ ಹೀರಿಸಿಕೊಳ್ಳಿ. ನಂತರ ಟೊಮೆಟೊ ಸಾಸ್, ಪುದೀನಾ ಚಟ್ನಿ ಅಥವಾ ಈರುಳ್ಳಿ ಸಲಾಡ್ ಜೊತೆಗೆ ಬಿಸಿಬಿಸಿಯಾಗಿ ಸವಿಯಿರಿ.

Must Read