July 7, 2026
Tuesday, July 7, 2026
spot_img

‘VIP ಸ್ಟಾಕ್ ಟಿಪ್ಸ್’ ಬಲೆಗೆ ಬೀಳಬೇಡಿ: ಹೂಡಿಕೆ ವಂಚನೆ ಬಗ್ಗೆ ಕೇಂದ್ರದ ಅಲರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಾಟ್ಸಾಪ್, ಟೆಲಿಗ್ರಾಮ್ ಸೇರಿದಂತೆ ಮೆಸೇಜಿಂಗ್ ಆ್ಯಪ್‌ಗಳ ಮೂಲಕ ನಡೆಯುತ್ತಿರುವ ನಕಲಿ ಹೂಡಿಕೆ ವಂಚನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (I4C) ಸಾರ್ವಜನಿಕರಿಗೆ ಮಹತ್ವದ ಎಚ್ಚರಿಕೆ ನೀಡಿದೆ. ತ್ವರಿತ ಹಾಗೂ ಖಾತರಿಯ ಲಾಭದ ಆಮಿಷ ತೋರಿಸಿ ಜನರನ್ನು ವಂಚಿಸಲಾಗುತ್ತಿದೆ ಎಂದು ತಿಳಿಸಿದೆ.

ನಕಲಿ ಹೂಡಿಕೆ ಗುಂಪುಗಳ ಮೂಲಕ ಮೋಸ

ಸೈಬರ್ ವಂಚಕರು ತಮ್ಮನ್ನು ಷೇರು ಮಾರುಕಟ್ಟೆ ತಜ್ಞರು ಅಥವಾ ಹಣಕಾಸು ಸಲಹೆಗಾರರೆಂದು ಪರಿಚಯಿಸಿಕೊಂಡು ವಾಟ್ಸಾಪ್ ಮತ್ತು ಟೆಲಿಗ್ರಾಮ್‌ನಲ್ಲಿ ನಕಲಿ ಹೂಡಿಕೆ ಗುಂಪುಗಳನ್ನು ರಚಿಸುತ್ತಿದ್ದಾರೆ. “VIP ಸ್ಟಾಕ್ ಟಿಪ್ಸ್”, “ಖಾತರಿ ಲಾಭ” ಹಾಗೂ ನಕಲಿ ಕಥೆಗಳ ಮೂಲಕ ಜನರ ವಿಶ್ವಾಸ ಗಳಿಸಿ ಮೋಸದ ಹೂಡಿಕೆ ವೇದಿಕೆಗಳಿಗೆ ಸೆಳೆಯುತ್ತಿದ್ದಾರೆ.

ಇದನ್ನೂ ಓದಿ:

ಖಾಸಗಿ ಲಿಂಕ್‌ಗಳಿಂದ ಆ್ಯಪ್ ಡೌನ್‌ಲೋಡ್ ಬೇಡ

ಅಧಿಕೃತ ಆ್ಯಪ್ ಸ್ಟೋರ್‌ಗಳನ್ನು ಬಿಟ್ಟು ಖಾಸಗಿ ಲಿಂಕ್‌ಗಳ ಮೂಲಕ ಟ್ರೇಡಿಂಗ್ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಲು ಒತ್ತಾಯಿಸಲಾಗುತ್ತಿದೆ. ಇಂತಹ ಆ್ಯಪ್‌ಗಳು ಹಣಕಾಸಿನ ವಂಚನೆ ಹಾಗೂ ವೈಯಕ್ತಿಕ ಮಾಹಿತಿಯ ಕಳವಿಗೆ ಕಾರಣವಾಗಬಹುದು ಎಂದು I4C ಎಚ್ಚರಿಸಿದೆ. ಹೂಡಿಕೆ ಮಾಡುವ ಮೊದಲು ಸಂಸ್ಥೆ ಹಾಗೂ ಬ್ರೋಕರ್‌ಗಳ ವಿಶ್ವಾಸಾರ್ಹತೆಯನ್ನು ಕಡ್ಡಾಯವಾಗಿ ಪರಿಶೀಲಿಸುವಂತೆ ಸೂಚಿಸಿದೆ.

ನಕಲಿ ಲಾಭ ತೋರಿಸಿ ಮತ್ತಷ್ಟು ಹಣ ಹೂಡಿಸುವ ತಂತ್ರ

ವಂಚಕರು ಆರಂಭದಲ್ಲಿ ಆ್ಯಪ್‌ನಲ್ಲಿ ನಕಲಿ ಲಾಭ ತೋರಿಸಿ ಇನ್ನಷ್ಟು ಹಣ ಹೂಡಲು ಪ್ರೇರೇಪಿಸುತ್ತಾರೆ. ಆದರೆ ಹಣ ಹಿಂಪಡೆಯುವ ವೇಳೆಗೆ ತೆರಿಗೆ, ಪ್ರೊಸೆಸಿಂಗ್ ಶುಲ್ಕ ಅಥವಾ ಖಾತೆ ಪರಿಶೀಲನೆ ಹೆಸರಿನಲ್ಲಿ ಹೆಚ್ಚುವರಿ ಹಣ ಕೇಳಲಾಗುತ್ತದೆ. ನಿಜವಾದ ಹಣಕಾಸು ಸಂಸ್ಥೆಗಳು ಹಣ ಬಿಡುಗಡೆಗೆ ಹೆಚ್ಚುವರಿ ಹಣ ಕೇಳುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !