July 7, 2026
Tuesday, July 7, 2026
spot_img

‘ಸಮುದ್ರ ನಮ್ಮನ್ನು ಬೇರ್ಪಡಿಸಿಲ್ಲ, ಬೆಸೆದಿದೆ’: ಇಂಡೋನೇಷ್ಯಾ ಸಂಸತ್‌ನಲ್ಲಿ ಮೋದಿ ಭಾಷಣ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡೋನೇಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಅಲ್ಲಿನ ಸಂಸತ್ತನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಭಾರತ-ಇಂಡೋನೇಷ್ಯಾ ಸಂಬಂಧವು ಕೇವಲ ರಾಜತಾಂತ್ರಿಕ ಮಟ್ಟಕ್ಕೆ ಸೀಮಿತವಲ್ಲ, ಸಾವಿರಾರು ವರ್ಷಗಳ ಸಾಂಸ್ಕೃತಿಕ, ಐತಿಹಾಸಿಕ ಮತ್ತು ನಾಗರಿಕತೆಯ ಬಾಂಧವ್ಯದ ಮೇಲೆ ನಿರ್ಮಾಣವಾಗಿದೆ ಎಂದು ಹೇಳಿದರು.

ರಾಮಾಯಣ-ಮಹಾಭಾರತ ನಮ್ಮನ್ನು ಬೆಸೆದಿವೆ

ಭಾರತ ಮತ್ತು ಇಂಡೋನೇಷ್ಯಾ ನಡುವಿನ ಸಂಬಂಧವು ರಾಮಾಯಣ, ಮಹಾಭಾರತ, ನಳಂದಾದ ಜ್ಞಾನ ಪರಂಪರೆ ಹಾಗೂ ಶತಮಾನಗಳ ಸಾಂಸ್ಕೃತಿಕ ವಿನಿಮಯದಿಂದ ಗಟ್ಟಿಯಾಗಿದೆ ಎಂದು ಮೋದಿ ಹೇಳಿದರು. ವಯಾಂಗ್ ಬೊಂಬೆಯಾಟ, ಸಾಂಪ್ರದಾಯಿಕ ನೃತ್ಯ, ಸಂಗೀತ, ಬೊರೊಬುದುರ್ ಮತ್ತು ಪ್ರಂಬನನ್ ದೇವಾಲಯಗಳು ಎರಡೂ ದೇಶಗಳ ನಂಟಿನ ಸಂಕೇತಗಳಾಗಿವೆ ಎಂದರು.

ಇದನ್ನೂ ಓದಿ:

‘ಸಮುದ್ರ ಬೇರ್ಪಡಿಸಿಲ್ಲ, ಸಂಪರ್ಕ ಬೆಳೆಸಿದೆ’

ಎರಡೂ ದೇಶಗಳ ರಾಜಧಾನಿಗಳ ನಡುವೆ ಸಾವಿರಾರು ಕಿಲೋಮೀಟರ್ ಅಂತರವಿದ್ದರೂ, ಸಮುದ್ರ ನಮ್ಮನ್ನು ಬೇರ್ಪಡಿಸಿಲ್ಲ. ಬದಲಾಗಿ ವ್ಯಾಪಾರ, ಸಂಸ್ಕೃತಿ ಮತ್ತು ಜನರ ಸಂಪರ್ಕವನ್ನು ಇನ್ನಷ್ಟು ಗಟ್ಟಿಗೊಳಿಸಿದೆ ಎಂದು ಮೋದಿ ತಿಳಿಸಿದರು. ಇಂಡೋನೇಷ್ಯಾದ ರಾಷ್ಟ್ರೀಯ ಲಾಂಛನ ‘ಗರುಡ’ ಹಾಗೂ ಒಡಿಶಾದ ‘ಬಾಲಿ ಯಾತ್ರೆ’ ಹಬ್ಬವನ್ನು ಉಲ್ಲೇಖಿಸಿ ಐತಿಹಾಸಿಕ ಸಂಬಂಧವನ್ನು ನೆನಪಿಸಿದರು.

ಸಹಕಾರಕ್ಕೆ ಹೊಸ ದಿಕ್ಕು

ಉಭಯ ರಾಷ್ಟ್ರಗಳು ಅಭಿವೃದ್ಧಿ, ಸಮುದ್ರ ಭದ್ರತೆ, ವ್ಯಾಪಾರ, ತಂತ್ರಜ್ಞಾನ ಹಾಗೂ ಜನರ ನಡುವಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದು ಪ್ರಧಾನಿ ಹೇಳಿದರು. ಭಾರತ ಮತ್ತು ಇಂಡೋನೇಷ್ಯಾ ಒಟ್ಟಾಗಿ ಸಾಗಿದರೆ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗೆ ಹೊಸ ಬಲ ಸಿಗಲಿದೆ ಎಂದು ಅಭಿಪ್ರಾಯಪಟ್ಟರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !