ನಾವು ಬರೀ ಕೋಲ್ಡ್ ಪ್ರೆಸ್ ಆಗಿರುವಂತಹ ಗಾಣದ ಎಣ್ಣೆಯನ್ನು ಮಾತ್ರ ಬಳಸೋದು ಅನ್ನೋರು ಖಂಡಿತವಾಗಿ ಈ ಸುದ್ದಿಯನ್ನು ಓದಿ. ಗಾಣದ ಎಣ್ಣೆ ಆರೋಗ್ಯಕ್ಕೆ ಉತ್ತಮ ಹೌದು, ಆದರೆ ಇದರ ಬಳಕೆಯಲ್ಲಿ ಒಂದೇ ಒಂದು ಸಮಸ್ಯೆ ಇದೆ. ಅದನ್ನು ನೀವು ನೋಡಿಕೊಂಡರೆ ಖಂಡಿತ ಕೋಲ್ಡ್ ಪ್ರೆಸ್ ಆಗಿರುವ ಎಣ್ಣೆಗಳನ್ನು ಬಳಕೆ ಮಾಡಬಹುದು.
ಈ ಎಣ್ಣೆಯಲ್ಲಿ ಆಂಟಿಆಕ್ಸಿಡೆಂಟ್ಸ್, ವಿಟಮಿನ್ಸ್, ಹೆಲ್ತಿ ಫ್ಯಾಟ್ಸ್ ಇದೆ. ಹೃದಯ ಸಂಬಂಧಿ ಆರೋಗ್ಯ ಚೆನ್ನಾಗಿರುತ್ತದೆ. ಇನ್ಫ್ಲಮೇಷನ್ ಕಡಿಮೆ ಮಾಡುತ್ತದೆ. ಜೊತೆಗೆ ಇದರಲ್ಲಿ ಕೆಮಿಕಲ್ ಇರೋದಿಲ್ಲ ಹೀಗಾಗಿ ಜೀರ್ಣವೂ ಸುಲಭ.
ಸಮಸ್ಯೆ ಏನು?
ಈ ಎಣ್ಣೆ ತಯಾರಿಸುವ ವೇಳೆ ಯಾವುದೇ ಅತಿಯಾದ ಹೀಟ್ ಅಥವಾ ಕೆಮಿಕಲ್‌ಗಳನ್ನು ಬಳಕೆ ಮಾಡೋದಿಲ್ಲ. ಈ ಕಾರಣದಿಂದ ಎಣ್ಣೆಯನ್ನು ಹೈ ಫ್ಲೇಮ್‌ನಲ್ಲಿ ಬಳಸುವುದು ಸೂಕ್ತವಲ್ಲ. ರೀಫೈನ್ಡ್ ಎಣ್ಣೆಗಳಲ್ಲಿ ನೀವು ಬೋಂಡ, ಬಜ್ಜಿ ಇನ್ನಿತರ ಎಣ್ಣೆಯ ಪದಾರ್ಥಗಳನ್ನು ಮಾಡಬಹುದು. ಆದರೆ ಗಾಣದ ಎಣ್ಣೆಯಲ್ಲಿ ಇದಕ್ಕೆ ಅವಕಾಶವಿಲ್ಲ. ಈ ರೀತಿ ಮಾಡಿದರೆ ಸಮಸ್ಯೆ ತಪ್ಪಿದ್ದಲ್ಲ.
ಈ ಎಣ್ಣೆ ದೀರ್ಘಕಾಲ ಬಾಳಿಕೆ ಬರೋದಿಲ್ಲ. ಹಾಳಾದ ಅಥವಾ ರಸ್ಟ್‌ನಂತಾದ ಎಣ್ಣೆಯನ್ನು ಸೇವಿಸಿದರೆ ಆರೋಗ್ಯ ಸಮಸ್ಯೆ ಆಗುತ್ತದೆ. ಇನ್ನು ಕೋಲ್ಡ್ ಪ್ರೆಸ್ಡ್ ಎಣ್ಣೆಗಳು ಗಾಢವಾಗಿರುವ ಕಾರಣ ಕ್ಯಾಲೋರಿ ಹೆಚ್ಚಿರುತ್ತದೆ. ಈ ಎಣ್ಣೆಯನ್ನು ಜಾಸ್ತಿ ತಿಂದರೆ ತೂಕ ಹೆಚ್ಚಳ ಸಾಮಾನ್ಯ.



