ಮೇಷ
ನಿಮ್ಮ ಕ್ರಿಯಾಶೀಲತೆ ಉತ್ತಮ ಫಲ ನೀಡಲಿದೆ. ಸಾಧನೆಯ ಮೆಟ್ಟಿಲು ಏರುವಿರಿ. ಏಕಾಂಗಿಗಳಿಗೆ ಸಂಗಾತಿ ಹುಡುಕಾಟ ಸಫಲ. ಧನ ಪ್ರಾಪ್ತಿ.
ವೃಷಭ
ಒತ್ತಡ ಹೆಚ್ಚು. ನಿಮ್ಮಿಂದ ಕಠಿಣ ಪರಿಶ್ರಮ ಅವಶ್ಯ. ಮನಸ್ಸಲ್ಲಿ ಏನೋ ಕಸಿವಿಸಿ. ಕೆಲ ವಿಚಾರಗಳು ಗೋಜಲು ಮೂಡಿಸುತ್ತವೆ. ಧ್ಯಾನದ ಮೊರೆ ಹೋಗಿ.
ಮಿಥುನ
ಸಾಧಿಸಲಾಗದ ವಿಚಾರದಲ್ಲಿ ವಚನ ನೀಡಲು ಹೋಗಬೇಡಿ. ಹಿನ್ನಡೆ ಎದುರಿಸುವಿರಿ. ಭಾವುಕ ಸನ್ನಿವೇಶ. ಮೆದುಳಿನ ಮಾತು ಕೇಳಿ.
ಕಟಕ
ನಿಮ್ಮ ಕಾರ್ಯಕ್ಕೆ ಅಡ್ಡಿಗಳು. ಹಿರಿಯರ ಜತೆ ಅಭಿಪ್ರಾಯ ಭೇದ. ಆರ್ಥಿಕ ಕೊರತೆ, ಸಾಲ ಪಡೆಯಲು ಹೋಗದಿರಿ. ಕೌಟುಂಬಿಕ ಅಶಾಂತಿ.
ಸಿಂಹ
ನಿಮ್ಮನ್ನು ಮೆಚ್ಚುವ ವ್ಯಕ್ತಿಯ ಭೇಟಿ. ಅವರ ಸಂಗದಲ್ಲಿ ಸಂತೋಷ. ಸಮಸ್ಯೆ ಮರೆತು ಉಲ್ಲಾಸದಿಂದ ಕಳೆಯಿರಿ. ವೃತ್ತಿ ಒತ್ತಡ ನಿವಾರಣೆ.
ಕನ್ಯಾ
ವೃತ್ತಿ ಸಂಬಂಧ ಪ್ರವಾಸ. ಅಹಿತಕರ ಬೆಳವಣಿಗೆ ನಡೆದೀತು. ಖರ್ಚು- ಆದಾಯದಲ್ಲಿ ಸಮತೋಲನ ಸಾಧಿಸಿ. ಕಣ್ಣಿಗೆ ಅಲರ್ಜಿ ಸಂಭವ.
ತುಲಾ
ಏಕಾಂಗಿತನ ತ್ಯಜಿಸಿ, ಇತರರ ಜತೆ ಬೆರೆಯಲು ಕಲಿಯಿರಿ. ಅನ್ಯರಿಗೆ ನೆರವು ನೀಡುವ ಮೂಲಕ ತೃಪ್ತಿ ಪಡೆಯುವಿರಿ. ಕೌಟುಂಬಿಕ ಗೊಂದಲ ನಿವಾರಣೆ.
ವೃಶ್ಚಿಕ
ಇಂದು ಏಳುಬೀಳು ಎರಡನ್ನೂ ಕಾಣುವಿರಿ. ಧಾರ್ಮಿಕ ಕ್ಷೇತ್ರ ಭೇಟಿಯಿಂದ ಸಮಾಧಾನ. ಆರ್ಥಿಕ ಪ್ರಗತಿ ಕುಂಠಿತ. ಸಾಂಸಾರಿಕ ಅತೃಪ್ತಿ.
ಧನು
ಜನಪ್ರಿಯತೆ ಹೆಚ್ಚುವ ಬೆಳವಣಿಗೆ. ಎಲ್ಲರ ಗೌರವ ಗಳಿಸುವಿರಿ. ಸಂಗಾತಿ ಜತೆ ಕಾಲ ಕಳೆಯಿರಿ. ಹೊರಗಿನ ಚಿಂತೆ ಮರೆಯಿರಿ. ಆರ್ಥಿಕ ಕೊರತೆ ನೀಗಲಿದೆ.
ಮಕರ
ಸಂಬಂಧದಲ್ಲಿ ಒಡಕು. ಪಾಲುದಾರರು ದೂರ ಸರಿದಾರು. ಧನ ನಷ್ಟ ಸಂಭವ. ಆರೋಗ್ಯ ಸಮಸ್ಯೆ ಕಾಡಬಹುದು. ಪಥ್ಯಾಹಾರ ಒಳಿತು.
ಕುಂಭ
ಹಿಡಿದ ಕೆಲಸ ಮೊದಲು ಮುಗಿಸಿ. ಅರ್ಧದಲ್ಲಿ ಕಾರ್ಯ ನಿಲ್ಲಿಸುವ ಸ್ವಭಾವ ಬಿಡಿ. ಪ್ರಮುಖ ಆರ್ಥಿಕ ನಿರ್ಧಾರ ತಾಳುವಿರಿ.
ಮೀನ
ಮನೆ ಮತ್ತು ಕಚೇರಿ ಎರಡೂ ಕಡೆ ಸವಾಲಿನ ದಿನ. ಹಲವು ವಿಷಯಗಳ ಒತ್ತಡ ಕಾಡುತ್ತದೆ. ಮನಶ್ಯಾಂತಿ ದೂರ. ಸಂಗಾತಿ ಜತೆ ವಾಗ್ವಾದ.



