ಮೇಷ
ನಿಮ್ಮ ಬದುಕಲ್ಲಿ ಹೊಸತನ ಮೂಡಲಿದೆ. ಹಳೆಯ ಚಿಂತೆ ಪರಿಹಾರ. ಹಿರಿಯರ ಜತೆ ಸೌಹಾರ್ದ ಸಂಬಂಧ ಇಟ್ಟುಕೊಳ್ಳಿ. ವೃತ್ತಿ ಯಲ್ಲಿ ಸಹಕಾರ.
ವೃಷಭ
ನಿಮ್ಮ ಏಳಿಗೆ ಬಯಸದ ಜನ ನಿಮ್ಮ ಸುತ್ತ ಇದ್ದಾರೆ. ಅವರನ್ನು ಗುರುತಿಸಿ ದೂರವಿಡಿ. ಆರ್ಥಿಕ ಸಮಸ್ಯೆ ಬೇಗ ಪರಿಹಾರ ಕಾಣಲಿದೆ.
ಮಿಥುನ
ಬಹುಕಾಲದಿಂದ ಬಾಕಿ ಉಳಿದ ಕಾರ್ಯ ಪೂರ್ಣ. ಹೊರೆ ಜಾರಿದ ನಿರಾಳತೆ. ಆರ್ಥಿಕ ಪುರಸ್ಕಾರ. ಆಪ್ತರೊಬ್ಬರ ವರ್ತನೆ ಬೇಸರ ತರಲಿದೆ.
ಕಟಕ
ನಿಮ್ಮ ಹಿನ್ನಡೆಗೆ ಕಾರಣವಾದ ಸಂಬಂಧಕ್ಕೆ ತಿಲಾಂಜಲಿ ಕೊಡಿ. ವಾಹನ ಖರೀದಿ ಇಚ್ಛೆ ಈಡೇರಿಸಲು ಸಕಾಲ. ಹಿರಿಯರ ಸಹಕಾರ.
ಸಿಂಹ
ನಿಮ್ಮ ಸಾಧನೆಗೆ ಹಿರಿಯರ ಮೆಚ್ಚುಗೆ. ವೇತನ ಬಡ್ತಿ ಸಂಭವ. ಸಂಗಾತಿಯ ಅಚ್ಚರಿಯ ನಡೆಯೊಂದು ಸಂತೋಷ ತುಂಬಲಿದೆ. ಧನಾಗಮ.
ಕನ್ಯಾ
ಚಿಂತೆ ಬಿಡಿ, ನಿಮ್ಮ ವ್ಯವಹಾರ ಸರಿದಾರಿಯಲ್ಲೆ ಸಾಗುತ್ತಿದೆ. ಸಂಗಾತಿ ಜತೆ ವಿನಯದ ವರ್ತನೆ ಇರಲಿ. ಖರ್ಚು ನಿಯಂತ್ರಿಸಲು ಸೂಕ್ತ ದಾರಿ ಹುಡುಕಿ.
ತುಲಾ
ನಿಮ್ಮ ಪಾಲಿಗೆ -ಲಪ್ರದ ದಿನ. ಬಹು ಉದ್ದೇಶಿತ ಕಾರ್ಯ ಸಂಪೂರ್ಣ. ವಿರೋಽಗಳ ಧ್ವನಿ ಅಡಗಲಿದೆ. ಖರ್ಚು ನಿಯಂತ್ರಣದ ನೆಮ್ಮದಿ.
ವೃಶ್ಚಿಕ
ಕೆರಿಯರ್‌ಗೆ ಸಂಬಂಽಸಿ ಶುಭ ಸುದ್ದಿ. ನಿಮ್ಮ ಸುತ್ತ ಆಗುವ ಬದಲಾವಣೆಗೆ ಹೊಂದಿಕೊಳ್ಳಿ. ಹಳೆಯ ಸ್ವಾಸ್ಥ್ಯಸಮಸ್ಯೆ ನಿವಾರಣೆ.
ಧನು
ಕಾಲಮಿತಿಯಲ್ಲಿ ಕೆಲಸ ಪೂರೈಸಬೇಕಾದ ಒತ್ತಡ. ಪರಿಸ್ಥಿತಿ ನಿಮಗೆ ಪೂರಕವಾಗಿರದು. ಹೊಸ ಸಂಬಂಧ ಮೊಳೆತೀತು. ಅವರಿಂದ ಹರ್ಷ.
ಮಕರ
ಹೊಸ ಹೊಣೆ ನಿಮ್ಮ ಹೆಗಲೇರಲಿದೆ. ಆರ್ಥಿಕ ಪರಿಸ್ಥಿತಿ ಅತೃಪ್ತಿ ತರುವುದು. ವ್ಯಕ್ತಿಯೊಬ್ಬರ ಆಕರ್ಷಣೆಗೆ ಒಳಗಾಗುವ ಸಾಧ್ಯತೆಯಿದೆ.
ಕುಂಭ
ನಿಮ್ಮ ವಿರುದ್ಧ ನಿಂದೆ ಕೇಳಿಬಂದೀತು. ವರ್ಚಸ್ಸು ವೃದ್ಧಿಗೆ ಗಮನ ಕೊಡಿ. ಕೆಲವರ ಸಹವಾಸ ತ್ಯಜಿಸಿ. ಒತ್ತಡ ನಿವಾರಣೆ, ಕಾರ್ಯ ಸುಗಮ.
ಮೀನ
ಪ್ರತಿಕೂಲ ಸನ್ನಿವೇಶ ಒದಗಿದರೂ ಬಳಿಕ ಅದು ನಿವಾರಣೆ ಆಗಲಿದೆ. ಆದರೆ ಮನದ ಕೊರಗು ಹೋಗದು. ಬೇಸರದ ಮನಸ್ಥಿತಿ ಆವರಿಸಲಿದೆ.



