August 25, 2026
Tuesday, August 25, 2026
spot_img

ಆಸ್ಟ್ರೇಲಿಯಾದ ಕ್ರಿಕೆಟ್ ಸ್ಟೇಡಿಯಂಗೆ ಪ್ರಧಾನಿ ಮೋದಿ ಭೇಟಿ, ಐತಿಹಾಸಿಕ ಒಪ್ಪಂದಕ್ಕೆ ಸಹಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರಧಾನಿ ನರೇಂದ್ರ ಮೋದಿ ಮೆಲ್ಬೋರ್ನ್‌ನ ಜಗತ್ಪ್ರಸಿದ್ಧ ಕ್ರೀಡಾಂಗಣಕ್ಕೆ ಭೇಟಿ ನೀಡಿದ್ದು, ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡೆಗಳ ಜಂಟಿ ಅಭಿವೃದ್ಧಿಗಾಗಿ ಮೆಲ್ಬೋರ್ನ್ ಕ್ರಿಕೆಟ್ ಕ್ಲಬ್ ಜೊತೆ ಭಾರತವು ಅತ್ಯಂತ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಘೋಷಿಸಿದರು.

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಕೇವಲ ಕ್ರಿಕೆಟ್ ಮಾತ್ರವಲ್ಲದೆ, ಫುಟ್‌ಬಾಲ್ ಹಾಗೂ ಭಾರತದ ಸಾಂಪ್ರದಾಯಿಕ ಕ್ರೀಡೆಯಾದ ಕಬಡ್ಡಿಯ ಜಂಟಿ ಅಭಿವೃದ್ಧಿಗೂ ಐತಿಹಾಸಿಕ ಒಪ್ಪಂದ ಮಾಡಿಕೊಳ್ಳಲಾಗಿದೆ. ಉಭಯ ದೇಶಗಳಲ್ಲಿರುವ ಉದಯೋನ್ಮುಖ ಕ್ರೀಡಾ ಪ್ರತಿಭೆಗಳನ್ನು ತಳಮಟ್ಟದಿಂದಲೇ ಗುರುತಿಸಿ, ಅವರಿಗೆ ಅಂತಾರಾಷ್ಟ್ರೀಯ ಮಟ್ಟದ ಅತ್ಯಾಧುನಿಕ ಕೋಚಿಂಗ್ ಸೌಲಭ್ಯಗಳನ್ನು ಒದಗಿಸಲು ಈ ಒಪ್ಪಂದ ನೆರವಾಗಲಿದೆ. ಶಾಲಾ ಮಕ್ಕಳಲ್ಲಿರುವ ಕ್ರೀಡಾ ಕೌಶಲ್ಯಗಳನ್ನು ಗುರುತಿಸಿ, ಅವರಿಗೆ ವಿಶ್ವದರ್ಜೆಯ ನೆರವು ನೀಡುವುದು ಈ ಒಪ್ಪಂದದ ಪ್ರಮುಖ ಗುರಿಯಾಗಿದೆ.

ಉಭಯ ದೇಶಗಳ ನಡುವೆ ನಡೆದಿದ್ದ ಬಾರ್ಡರ್, ಗವಾಸ್ಕರ್ ಟ್ರೋಫಿ ಸರಣಿಯ ಐತಿಹಾಸಿಕ ಪಂದ್ಯಗಳನ್ನು ನೆನೆದ ಪ್ರಧಾನಿ, ನಾನು ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಅಲ್ಬನೀಸ್ ಅವರು ಒಟ್ಟಿಗೆ ಕುಳಿತು ಭಾರತದಲ್ಲೇ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಿದ್ದೆವು. ಆ ಕ್ಷಣಗಳು ನಮ್ಮ ದೇಶಗಳ ನಡುವಿನ ಆಳವಾದ ಸ್ನೇಹ ಮತ್ತು ಪರಸ್ಪರ ಗೌರವಕ್ಕೆ ಸಾಕ್ಷಿಯಾಗಿವೆ ಎಂದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !