July 12, 2026
Sunday, July 12, 2026
spot_img

ಜಾನಕಿಯಮ್ಮನ ನೆನಪು ಶಾಶ್ವತವಾಗಿಸಲು ಮೈಸೂರು ವಿವಿಯಲ್ಲಿ ‘ಸಂಗೀತ ಅಧ್ಯಯನ ಪೀಠ’ ತೆರೆಯಬೇಕು: ಜಯಮಾಲ ಮನವಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಹಿರಿಯ ಗಾಯಕಿ ಎಸ್. ಜಾನಕಿ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಮಾಜಿ ಸಚಿವೆ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ನಟಿ ಜಯಮಾಲ, ಗಾನಕೋಗಿಲೆಯ ಸಂಗೀತ ಪರಂಪರೆಯನ್ನು ಮುಂದಿನ ಪೀಳಿಗೆಗೆ ದಾಟಿಸಲು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅವರ ಹೆಸರಿನಲ್ಲಿ ವಿಶೇಷ ಅಧ್ಯಯನ ಪೀಠವನ್ನು ಆರಂಭಿಸಬೇಕು ಎಂದು ಸರ್ಕಾರಕ್ಕೆ ವಿಶೇಷ ಮನವಿ ಮಾಡಿದ್ದಾರೆ.

ಮೈಸೂರಿನೊಂದಿಗೆ ಅವಿನಾಭಾವ ಸಂಬಂಧ:

ಜಾನಕಿಯಮ್ಮ ಮೈಸೂರನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ಮೈಸೂರು ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು. ಹಾಗಾಗಿ ಅದೇ ವಿಶ್ವವಿದ್ಯಾಲಯದಲ್ಲಿ ಸಂಗೀತ ಪೀಠ ಸ್ಥಾಪಿಸುವುದು ಅತ್ಯಂತ ಸೂಕ್ತ” ಎಂದು ಜಯಮಾಲ ತಿಳಿಸಿದ್ದಾರೆ. ಈ ಅಧ್ಯಯನ ಪೀಠದ ಮೂಲಕ ದಕ್ಷಿಣ ಭಾರತದ ಶಾಸ್ತ್ರೀಯ ಮತ್ತು ಸುಗಮ ಸಂಗೀತದ ಕುರಿತು ಯುವ ಪ್ರತಿಭೆಗಳು ಸಂಶೋಧನೆ ಮತ್ತು ತರಬೇತಿ ಪಡೆಯಲು ಅನುಕೂಲವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸರ್ಕಾರಕ್ಕೆ ಮುಕ್ತ ಕರೆ:

 ಸ್ಮಾರಕ ನಿರ್ಮಾಣದ ಜತೆಗೆ ಶೈಕ್ಷಣಿಕವಾಗಿ ಜಾನಕಿ ಅಮ್ಮನ ಹೆಸರನ್ನು ಅಮರವಾಗಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:

ಚಿತ್ರರಂಗದ ಧ್ವನಿಯಾಗಿದ್ದ ಜಾನಕಿಯಮ್ಮ

ಜಾನಕಿಯಮ್ಮ ಗಾಯನಕ್ಕೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದ ಜಯಮಾಲ ಹಳೆಯ ದಿನಗಳನ್ನು ನೆನೆದು ಭಾವುಕರಾದರು. ಜಾನಕಿ ಅಮ್ಮನ ಧ್ವನಿ ಕೇವಲ ಹಾಡಲ್ಲ, ಅದು ಕರುನಾಡಿನ ಪ್ರತಿಯೊಬ್ಬರ ಭಾವನೆಗಳ ಜತೆ ಬೆರೆತಿದೆ ಎಂದು ಅವರು ಕಂಬನಿ ಮಿಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !