July 12, 2026
Sunday, July 12, 2026
spot_img

ಭಾರತ ತಂಡದಲ್ಲಿ ದಿಢೀರ್ ಬದಲಾವಣೆ: ಸ್ಟಾರ್ ಆಟಗಾರ ಔಟ್, ಯುವ ವೇಗಿಗೆ ಸಿಕ್ತು ಚಾನ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಆರಂಭಕ್ಕೂ ಮುನ್ನವೇ ಭಾರತ ತಂಡದಲ್ಲಿ ಮಹತ್ವದ ಬದಲಾವಣೆ ನಡೆದಿದೆ. ಗಾಯದ ಸಮಸ್ಯೆಯಿಂದ ಯುವ ಆಲ್‌ರೌಂಡರ್ ಹರ್ಷಿತ್ ರಾಣಾ ತಂಡದಿಂದ ಹೊರಬಿದ್ದಿದ್ದು, ಅವರ ಸ್ಥಾನಕ್ಕೆ ವೇಗಿ ಪ್ರಿನ್ಸ್ ಯಾದವ್‌ಗೆ ಅವಕಾಶ ನೀಡಲಾಗಿದೆ. ಇದೇ ವೇಳೆ ಮತ್ತೋರ್ವ ಗಾಯಾಳು ಆಟಗಾರನ ಸ್ಥಾನಕ್ಕೂ ಹೊಸ ಆಯ್ಕೆ ಪ್ರಕಟಿಸಲಾಗಿದೆ.

ಗಾಯದಿಂದ ಹರ್ಷಿತ್‌ಗೆ ಹಿನ್ನಡೆ

ಮಂಡಿರಜ್ಜು ಗಾಯದಿಂದ ಬಳಲುತ್ತಿರುವ ಹರ್ಷಿತ್ ರಾಣಾ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ. ಹೀಗಾಗಿ ಅವರ ಬದಲಿಗೆ ಯುವ ವೇಗಿ ಪ್ರಿನ್ಸ್ ಯಾದವ್ ಅವರನ್ನು ಭಾರತ ತಂಡಕ್ಕೆ ಸೇರಿಸಲಾಗಿದೆ.

ವರುಣ್ ಸ್ಥಾನಕ್ಕೆ ಬಿಷ್ಣೋಯ್

ಸ್ಪಿನ್ನರ್ ವರುಣ್ ಚಕ್ರವರ್ತಿ ಕೂಡ ಗಾಯದ ಕಾರಣ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದಿದ್ದಾರೆ. ಅವರ ಸ್ಥಾನವನ್ನು ರವಿ ಬಿಷ್ಣೋಯ್ ಭರಿಸಲಿದ್ದು, ಮತ್ತೊಮ್ಮೆ ಭಾರತ ತಂಡದಲ್ಲಿ ಅವಕಾಶ ಪಡೆದಿದ್ದಾರೆ.

ಇದನ್ನೂ ಓದಿ:

ಯುವ ಆಟಗಾರರಿಗೆ ಅದೃಷ್ಟ

ಪ್ರಿನ್ಸ್ ಯಾದವ್ ಹಾಗೂ ರವಿ ಬಿಷ್ಣೋಯ್ ಇಬ್ಬರೂ ಇತ್ತೀಚಿನ ಸರಣಿಗಳಲ್ಲಿ ಅವಕಾಶ ಕಳೆದುಕೊಂಡಿದ್ದರೂ, ಗಾಯಾಳು ಆಟಗಾರರ ಸ್ಥಾನದಲ್ಲಿ ಮತ್ತೆ ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ.

ಜುಲೈ 14ರಿಂದ ಏಕದಿನ ಸರಣಿ

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಜುಲೈ 14ರಿಂದ ಆರಂಭವಾಗಲಿದೆ. ಟಿ20 ಸರಣಿಯಲ್ಲಿ ಎದುರಾದ ನಿರಾಸೆಯ ಬಳಿಕ, ಏಕದಿನ ಸರಣಿಯಲ್ಲಿ ಗೆಲುವಿನ ಮೂಲಕ ಪುಟಿದೇಳುವ ಗುರಿಯೊಂದಿಗೆ ಟೀಂ ಇಂಡಿಯಾ ಕಣಕ್ಕಿಳಿಯಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !