July 13, 2026
Monday, July 13, 2026
spot_img

ಪೊಲೀಸ್ ಠಾಣೆಗಳಿಗೆ ಬರಲಿದೆ ಹೊಸ ಲುಕ್, ದೂರುದಾರರಿಗೆ ಹೊಸ ಅನುಭವ ನೀಡಲು ಮೆಗಾ ಪ್ಲಾನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:


ಪೊಲೀಸ್ ಠಾಣೆ ಎಂದರೆ ಭಯದಿಂದ ಅಲ್ಲ ಆತ್ಮವಿಶ್ವಾಸದಿಂದ ಹೋಗುವ ಸ್ಥಳವಾಗಬೇಕು ಎಂಬ ಉದ್ದೇಶದಲ್ಲಿ ಹಲವು ಮಹತ್ವದ ಸುಧಾರಣಾ ಕ್ರಮ ತರಲು ಕೇರಳ ಸರ್ಕಾರ ಹೆಜ್ಜೆಯಿಟ್ಟಿದೆ.


ಮುಂದಿನ ತಿಂಗಳ 15ರಿಂದ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಿಗೆ ಏಕರೂಪದ ಬಣ್ಣ, ಸಾರ್ವಜನಿಕ ಸೇವೆ ಇನ್ನಷ್ಟು ಜನಸ್ನೇಹಿಯಾಗಿಸುವ ಹಲವು ಬದಲಾವಣೆಗಳನ್ನು ಜಾರಿಗೆ ತರಲು ಸರಕಾರ ಮುಂದಾಗಿದೆ. ಈ ಕುರಿತು ಸುಳಿವು ನೀಡಿರುವ ಕೇರಳ ಗೃಹ ಸಚಿವ ರಮೇಶ್ ಚೆನ್ನಿತ್ತಲ, ಸಾರ್ವಜನಿಕರಿಂದ ಬರುವ ದೂರುಗಳ ವಿಲೇವಾರಿಯ ಬಗ್ಗೆ ಪೊಲೀಸ್ ಠಾಣೆಗಳಲ್ಲಿ ವಿಶೇಷ ಲೆಕ್ಕಪರಿಶೋಧನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.


ಹೊಸ ಯೋಜನೆಯಡಿ ಪೊಲೀಸ್ ಠಾಣೆಗಳಿಗೆ ಬರುವ ಪ್ರತಿಯೊಬ್ಬರಿಗೂ ಗೌರವಯುತ ಸ್ವಾಗತ ದೊರೆಯುವಂತೆ ವ್ಯವಸ್ಥೆ, ದೂರು ಸಲ್ಲಿಸಲು ಬರುವವರಿಗೆ ಕುಳಿತುಕೊಳ್ಳುವ ವ್ಯವಸ್ಥೆ, ಸ್ವಚ್ಛ ಮತ್ತು ಸುಸಜ್ಜಿತ ಠಾಣೆ, ವೇಗವಾಗಿ ದೂರುಗಳ ನಿರ್ವಹಣೆ ಸೇರಿದಂತೆ ಹಲವು ಬದಲಾವಣೆ, ಇದರ ಜೊತೆಗೆ ಪೊಲೀಸ್ ಇಲಾಖೆಯ ವೆಬ್‌ಸೈಟ್‌ ಅನ್ನು ಆಧುನೀಕರಿಸಿ ಸಾರ್ವಜನಿಕ ಸೇವೆ ಇನ್ನಷ್ಟು ಸುಲಭಗೊಳಿಸಲು ಕ್ರಮ, ಕಳಪೆ ಸ್ಥಿತಿಯ ಪೊಲೀಸ್ ಠಾಣೆಗಳನ್ನು ನವೀಕರಿಸಿ ಉತ್ತಮ ಮೂಲಸೌಕರ್ಯ ಕಲ್ಪಿಸುವ ಯೋಜನೆ ಸರಕಾರದ ಚಿಂತನೆಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !